ಕಾಂಗ್ರೆಸ್ ಶಾಸಕ ಬಿ.ಆರ್ ಪಾಟೀಲ್ (BR Patil) ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣ ರಾಜ್ಯ ಸರ್ಕಾರದ ವಸತಿ ಯೋಜನೆ. ಈ ವಸತಿ ಯೋಜನೆಯಲ್ಲಿ ಹಣ ನೀಡಿದವರಿಗಷ್ಟೇ ಮನೆಗಳನ್ನು ಮಂಜೂರು ಮಾಡಲಾಗ್ತಿದೆ ಅಂತ ಸಚಿವ ಜಮೀರ್ ಅಹ್ಮದ್ ಖಾನ್ (Zameer ahemad khan) ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಜೊತೆ ಬಿಆರ್ ಪಾಟೀಲ್ (BR Patil) ಮಾತನಾಡಿರೋ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೌದು, ರಾಜೀವ್ಗಾಂಧಿ ವಸತಿ ಯೋಜನೆಯಲ್ಲಿ ಗೋಲ್ಮಾಲ್ ನಡೆಸಿರುವ ಆರೋಪ ಕೇಳಿ ಬಂದಿದೆ.ಈ ವಸತಿಯ ಯೋಜನೆಯಡಿ ಹಣ ನೀಡಿದವರಿಗಷ್ಟೆ ಮನೆ ಮಂಜೂರು ಆಗ್ತಿದೆ. ನಮ್ಮ ಸರ್ಕಾರವನ್ನೆ ದೂರಲು ಬೇಸರವಾಗ್ತಿದೆ ಎಂದು ಬಿ.ಆರ್ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಆಡಿಯೋ ಮತ್ತ್ಯಾರೋ ಮಾತನಾಡಿರೋದಲ್ಲ..ನಾನೇ ಮಾತನಾಡಿರುವ ಆಡಿಯೋ.. ಈ ರೀತಿ ಹಣ ನೀಡಿದವರಿಗೆ ಮಾತ್ರ ಮನೆ ಸಿಕ್ಕಿದೆ ಎಂಬುದು ನನ್ನ ಕ್ಷೇತ್ರದಲ್ಲಿ ನನ್ನ ಮತದಾರರು ನನ್ನ ಗಮನಕ್ಕೆ ತಂದಿದ್ದಾರೆ ಎಂದು ಖುದ್ದು ಶಾಸಕ ಬಿ.ಆರ್.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.











