ಎಲ್ಲೆಲ್ಲೂ ಆರ್.ಸಿ.ಬಿ (RCB) ಜಯಘೋಷ.. ಎಲ್ಲಿ ನೋಡಿದ್ರೂ ಈ ಸಲ ಕಪ್ ನಮ್ದೇ ಅನ್ನೋ ಘೋಷವಾಕ್ಯ. ಈ ಬಾರಿಯ ಐಪಿಎಲ್ (Ipl 2025) ಸೀಸನ್ ನಲ್ಲಿ ಆರ್.ಸಿ.ಬಿ ಫೈನಲ್ ಪ್ರವೇಶ ಮಾಡಿದ್ದು ಇಂದು ಪಂಜಾಬ್ (PBKS) ವಿರುದ್ಧ ಸೆಣೆಸಾಡಲಿದೆ. ಈ ಪಂದ್ಯದಲ್ಲಿ ಗೆದ್ದು ಆರ್.ಸಿ.ಬಿ ತನ್ನ 18 ವರ್ಷಗಳ ಕಾಯುವಿಕೆಯನ್ನು ಅಂತ್ಯಗೊಳಿಸಲಿ ಎಂಬುದು ಅಭಿಮಾನಿಗಳ ಆಶಯ.

ಹೀಗಾಗಿ ಇಂದು ರಾಜ್ಯ ಹಲವೆಡೆ ರಾಯಲ್ ಚಾಲೆಂಜರ್ಸ್ (Royal challengers Bengaluru) ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ಹಲವು ದೇವಾಲಯಗಳಲ್ಲಿ ಆರ್.ಸಿ.ಬಿ ಗೇಕುವಿಗಾಗಿ ವಿಶೇಷ ಪೂಜಾ ಪುನಸ್ಕಾರಗಳು ನೆರವೇರಿದೆ. ಆರ್.ಸಿ.ಬಿ ಅಭಿಮಾನಿಗಳ 18 ವರ್ಷಗಳ ಕಾಯುವಿಕೆ ಅಂತ್ಯವಾಗಲಿ, ಈ ಸಲ ಕಪ್ ಗೆದ್ದು ಬರಲಿ ಎಂದು ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸಿಕೊಂಡಿದ್ದಾರೆ.
ಹೀಗಾಗಿ ಹಲವು ಕಡೆಹಳಲ್ಲಿ ಹಲವು ರೀತಿಯಲ್ಲಿ ಅಭಿಮಾನಿಗಳು ತಮ್ಮ ಮೆಚ್ಚಿನ ರಾಯಲ್ ಚಾಲೆಂಜರ್ಸ್ ಗೆ ವಿವಿಧ ರೀತಿಯಲ್ಲಿ ಆಲ್ ದ ಬೆಸ್ಟ್ ಹೇಳ್ತಿದ್ದು, ಶಿವಮೊಗ್ಗದ ಕುಂಬಾರಗುಂಡಿಯ ಅಭಿಮಾನಿಗಳು ಸ್ವಲ್ಪ ವಿಭಿನ್ನವಾಗಿಯೇ ಈ ಬಾರಿ ಆರ್.ಸಿ.ಬಿ ಗೆ ಶುಭ ಕೋರಿದ್ದಾರೆ. ನಟ ದರ್ಶನ್ ಮತ್ತು ಕಿಚ್ಚ ಸುದೀಪ್ ಒಟ್ಟಾಗಿ ಇರುವ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನ ಫೋಟೋವನ್ನು ಬ್ಯಾನರ್ ಮಾಡಿಸಿ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

ಹೌದು ಈ ಹಿಂದೆ ದರ್ಶನ್ ಮತ್ತು ಸುದೀಪ್ ಅವರ ಸ್ನೇಹ ಭಾಂದ್ಯ ಅದ್ಭುತವಾಗಿದ್ದು. ಆ ಸಂದರ್ಭದಲ್ಲಿ ಜೊತೆ ಜೊತೆಯಾಗಿ ಸಿಸಿಎಲ್ ಲೀಗ್ ಕೂಡ ಆಡುತ್ತಿದ್ದರು. ಆದ್ರೆ ಆ ನಂತರ ವೈಮನಸ್ಸಿನಿಂದ ಅಂತರ ಕಾಯ್ದುಕೊಂಡಿದ್ದಾರೆ. ಆದ್ರೆ ಹಲವು ಅಭಿಮಾನಿಗಳಲ್ಲಿ ಈಗಲೂ ಈ ಇಬ್ಬರು ನಟರು ಮತ್ತೆ ಒಂದಾಗಬೇಕು ಎಮ ಆಶಯವಿದೆ. ಹೀಗಾಗಿ ಈ ರೀತಿಯ ವಿಭಿನ್ನ ಬ್ಯಾನರ್ ಮೂಲಕ ಗಮನ ಸೆಳೆದಿದ್ದಾರೆ.











