ಅಕ್ರಮ ಗಣಿ ಪ್ರಕರಣದಲ್ಲಿ ಜನಾರ್ದನರೆಡ್ಡಿ ಅಪರಾಧಿ ಎಂದು ಕೋರ್ಟ್ ತೀರ್ಪು ನೀಡಿದ್ದು, OMC ಗಣಿ ಹಗರಣದಲ್ಲಿ ರೆಡ್ಡಿ ಅಪರಾಧಿ ಎಂದು ಘೋಷಣೆ ಮಾಡಲಾಗಿದೆ. ಸಿಬಿಐ ಕೋರ್ಟ್‌ನಿಂದ ಜನಾರ್ದನರೆಡ್ಡಿಗೆ ಶಾಕ್ ಎದುರಾಗಿದೆ. ರಾಜ್ಯದ 29 ಲಕ್ಷ ಮೆಟ್ರಿಕ್ ಟನ್ ಅದಿರು ಕದ್ದ ಆರೋಪ ಇತ್ತು. ಈಗಾಗಲೇ ಮೂರೂವರೇ ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಜನಾರ್ದನ ರೆಡ್ಡಿ, 16 ವರ್ಷದ ಬಳಿಕ ಅಪರಾಧಿ ಎಂದು ಕೋರ್ಟ್ ತೀರ್ಪು ನೀಡಿದೆ. 884 ಕೋಟಿ ರೂಪಾಯಿ ಆದಾಯ ಪಡೆದಿದ್ದ ಆರೋಪ ಎದುರಾಗಿತ್ತು. ಯಡಿಯೂರಪ್ಪ ಆಡಳಿತ ಅವಧಿಯಲ್ಲಿ ಅಕ್ರಮ ನಡೆದಿತ್ತು. A1 ಶ್ರೀನಿವಾಸ್ ರೆಡ್ಡಿ, A2 ಜನಾರ್ದನ ರೆಡ್ಡಿ, A3 ರಾಜಗೋಪಾಲ ರೆಡ್ಡಿ, A4 ಅಲಿಖಾನ್ ಆಗಿದ್ದಾರೆ.

ಜನಾರ್ದನರೆಡ್ಡಿ ಅಪರಾಧಿ ಎಂದು ಕೋರ್ಟ್ ತೀರ್ಪು ನೀಡಿದ ಬಳಿಕ 7 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿ ಕೋರ್ಟ್ ಆದೇಶ ಮಾಡಿದೆ. ಈಗಾಗಲೇ ಮೂರೂವರೆ ವರ್ಷ ಜೈಲುವಾಸ ಅನುಭವಿಸಿರುವ ಜನಾರ್ದನರೆಡ್ಡಿಗೆ ಮತ್ತೆ ಜೈಲೂಟ ಫಿಕ್ಸ್ ಆಗಿದೆ. A1 ಶ್ರೀನಿವಾಸ್ ರೆಡ್ಡಿ, A2 ಜನಾರ್ದನ ರೆಡ್ಡಿ, A3 ರಾಜಗೋಪಾಲ ರೆಡ್ಡಿ, A4 ಅಲಿಖಾನ್, A5 ಶ್ರೀಲಕ್ಷ್ಮೀಗೂ ಜೈಲೂಟ ಫಿಕ್ಸ್ ಆಗಿದೆ. ಚಂಚಲಗುಡ ಜೈಲೂಟದ ಬಳಿಕ ಬೆಂಗಳೂರಲ್ಲೂ ಜೈಲುವಾಸ ಅನುಭವಿಸಿದ್ರು. ಇದೀಗ ಮತ್ತೆ ಯಾವ ಜೈಲಿಗೆ ಹೋಗ್ತಾರೆ ಅನ್ನೋ ಕುತೂಹಲ ಮೂಡಿದೆ.
ಅಕ್ರಮ ಗಣಿಗಾರಿಗೆ ಕೇಸಲ್ಲಿ ಗಂಗಾವತಿ ಶಾಸಕ ಜನಾರ್ದನರೆಡ್ಡಿ ಅಪರಾಧಿ ಎಂದು ಕೋರ್ಟ್ ಆದೇಶ ಮಾಡಿದ್ದು, ಭವಿಷ್ಯ ಕಗ್ಗತ್ತಲಲ್ಲಲ್ಲಿ ಮುಳುಗಿದೆ. CBI ಕೋರ್ಟ್ ತೀರ್ಪು ನೀಡಿದ್ದು, ಜನಾರ್ದನ ರೆಡ್ಡಿ ಶಾಸಕ ಸ್ಥಾನಕ್ಕೆ ಕುತ್ತು ತರುತ್ತಾ ಅನ್ನೋ ಅನುಮಾನ ಮೂಡಿಸಿದೆ. ಶಾಸಕ ಜನಾರ್ದನ ರೆಡ್ಡಿಗೆ 7 ವರ್ಷ ಜೈಲು ಶಿಕ್ಷೆ ಆಗಿದ್ದು, 3 ವರ್ಷಕ್ಕಿಂತ ಹೆಚ್ಚು ಶಿಕ್ಷೆ ಆಗಿರುವುದರಿಂದ ಜೈಲು ವಾಸ ಖಚಿತ. ಜಾಮೀನಿಗಾಗಿ ಹೈದರಾಬಾದ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಬೇಕು. ಹೈಕೋರ್ಟ್ ಜಾಮೀನು ನೀಡುವವರೆಗೆ ಜೈಲಿನಲ್ಲಿರಬೇಕು. ಶಿಕ್ಷೆಗೆ ತಡೆಯಾಜ್ಞೆ ಸಿಗದಿದ್ದರೆ ಶಾಸಕ ಸ್ಥಾನಕ್ಕೂ ಕುತ್ತು ಬರಲಿದ್ದು, ಶಾಸಕ ಸ್ಥಾನದಿಂದ ಅನರ್ಹಗೊಳ್ಳುವ ಭೀತಿಯೂ ಎದುರಾಗಿದೆ.

ಆಂಧ್ರದ ಅನಂತಪುರ ಜಿಲ್ಲೆ ಓಬಳಾಪುರಂನಲ್ಲಿ ಅಕ್ರಮ ಗಣಿಗಾರಿಕೆ ಮಾಡಿದ ಆರೋಪ ಕೇಳಿ ಬಂದಿತ್ತು. ಅಕ್ರಮ ಗಣಿಗಾರಿಕೆ ಮಾತ್ರವಲ್ಲ ಆಂಧ್ರ, ಕರ್ನಾಟಕ ಗಡಿ ಗುರುತು ನಾಶ ಮಾಡಿದ ಆರೋಪವೂ ರೆಡ್ಡಿ ಮೇಲಿತ್ತು. 29 ಲಕ್ಷ ಕೋಟಿ ಟನ್ ಅದಿರು ಕದ್ದ ಆರೋಪ ರೆಡ್ಡಿ ಮೇಲಿತ್ತು. ಐಪಿಸಿ ಸೆಕ್ಷನ್ 120 ಬಿ, 420, 409, 468, 471 ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್ 13(2), 13(1)(ಡಿ) ಅಡಿ ಪ್ರಕರಣ ದಾಖಲು ಮಾಡಲಾಗಿತ್ತು. ಬರೋಬ್ಬರಿ 13 ವರ್ಷಗಳಿಂದ ನಡೆದ ಸುದೀರ್ಘ ವಿಚಾರಣೆ ಬಳಿಕ ಕೋರ್ಟ್ ಆದೇಶ ಮಾಡಿದೆ. ಮೂರು ಸಾವಿರಕ್ಕೂ ಅಧಿಕ ದಾಖಲೆಗಳ ಪರಿಶೀಲನೆ ಮಾಡಿದ್ದು, 219 ಪ್ರತ್ಯಕ್ಷ ಹಾಗೂ ಪರೋಕ್ಷ ಸಾಕ್ಷಿಗಳನ್ನು ವಿಚಾರಣೆ ಮಾಡಲಾಗಿದೆ. ಇದೇ ಪ್ರಕರಣದಲ್ಲಿ ಸೆಪ್ಟೆಂಬರ್ 5, 2011ರಲ್ಲಿ ರೆಡ್ಡಿಯನ್ನ ಬಂಧಿಸಿದ್ದ ಸಿಬಿಐ, ಆಂಧ್ರದ ಚಂಚಲಗುಡ ಜೈಲಿಗೆ ಕಳುಹಿಸಿತ್ತು. ನಂತರ ಬೆಂಗಳೂರಿನ ಸೆಂಟ್ರಲ್ ಜೈಲಿಗೆ ರೆಡ್ಡಿ ಶಿಫ್ಟ್ ಮಾಡಲಾಗಿತ್ತು.