ರಾಜ್ಯದಲ್ಲಿ ಮದ್ಯದ ಬೆಲೆ ಏರಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಅಬಕಾರಿ ಸಚಿವ ತಿಮ್ಮಾಪುರ (RB Timmapura) ಪ್ರತಿಕ್ರಿಯಿಸಿದ್ದು, ರಾಜ್ಯದಲ್ಲಿ ಸ್ವಲ್ಪ ಬೀಯರ್ ಬೆಲೆ ಹೆಚ್ಚಳ (Beer price hike) ಮಾಡಲಾಗಿದೆ. ಬೀಯರ್ ೧೦ರೂ ಬೆಲೆ ಹೆಚ್ಚಳವಾಗಿದೆ.ಆದ್ರೆ ನೆರೆ ರಾಜ್ಯಗಳಿಗಿಂತ ನಮ್ಮಲ್ಲಿ ಬೆಲೆ ಇನ್ನೂ ಕಡಿಮೆ ಇದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಕರ್ನಾಟಕದ ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಪೊರ್ಸ್ ಸ್ಲ್ಯಾಬ್ ಗಿಂತ ನಮ್ಮಲ್ಲಿ ಬೆಲೆ ಕಡಿಮೆ ಇದೆ ಎಂದಿದ್ದಾರೆ.ಇನ್ನು ಬೆಲೆ ಏರಿಕೆಯಿಂದ ಕುಡುಕರ ಸಂಖ್ಯೆ ಕಡಿಮೆ ಆಗಲ್ವಾ ಎಂಬ ವಿಚಾರವಾಗಿ ಕುಡುಕರ ಸಂಖ್ಯೆ ಕಡಿಮೆ ಆದ್ರೆ ಒಳ್ಳೆಯದಲ್ಲ.ನಾವು ಕ್ವಾಲಿಟಿ ಡ್ರೀಂಕ್ಸ್ ಕೊಡಬೇಕು ಅಂತಾ ಬೆಲೆ ಹೆಚ್ಚಳ ಮಾಡಿದ್ದೇವೆ ಎಂದಿದ್ದಾರೆ.
ಇನ್ನು ಈ ವಿಚಾರಕ್ಕೆ ಪ್ರತಿಭಟನೆ ಆಗೋದಿಲ್ಲ.ಕುಡಿಯುವರ ಸಂಖ್ಯೆ ಕಡಿಮೆ ಆದ್ರೆ ಒಳ್ಳೆಯದಲ್ಲ.ಎಲ್ಲ ಸರ್ಕಾರಗಳ ಅವಧಿಯಲ್ಲೂ ಮದ್ಯದ ಬೆಲೆ ಏರಿಕೆ ಮಾಡುತ್ತಾನೇ ಬಂದಿದ್ದಾರೆ.ನಮ್ಮ ಸರ್ಕಾರದಲ್ಲೂ ಸ್ವಲ್ಪ ಬೆಲೆ ಏರಿಕೆ ಮಾಡಲಾಗಿದೆ ಎಂದು ತಿಮ್ಮಾಪುರ ಹೇಳಿದ್ದಾರೆ.


