
ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲಿನ ಫೈರಿಂಗ್ ಬಗ್ಗೆ ಸಾಕಷ್ಟು ಅನುಮಾನಗಳು ಮೂಡ್ತಿವೆ. ರಿಕ್ಕಿ ರೈ ಆಪ್ತರೇ ಭಾಗಿಯಾಗಿರುವ ಶಂಕೆಯೂ ವ್ಯಕ್ತವಾಗಿದ್ದು, ಆಪ್ತರನ್ನ ಪೊಲೀಸರು ತೀವ್ರವಾಗಿ ವಿಚಾರಣೆ ಮಾಡ್ತಿದ್ದಾರೆ. ರಿಕ್ಕಿ ರೈ ಫೈರಿಂಗ್ ವಿಚಾರವಾಗಿ ಪೊಲೀಸರಿಗೇ ಅನುಮಾನಗಳು ಮೂಡಿವೆ. ರಿಕ್ಕಿ ರೈ ಜೊತೆಯಲ್ಲಿದ್ದ ಗನ್ಮ್ಯಾನ್ಗಳೇ ಭಾಗಿಯಾಗಿರುವ ಅನುಮಾನ ಪೊಲೀಸರಲ್ಲಿ ಮೂಡಿದೆ. ರಿಕ್ಕಿ ರೈ ಜೊತೆಗೆ 6 ಜನ ಗನ್ ಮೆನ್ಗಳನ್ನ ಬಿಡದಿ ಠಾಣೆಗೆ ಕರೆಸಿ ತೀವ್ರವಾಗಿ ವಿಚಾರಣೆ ಮಾಡಿದ್ದಾರೆ.
ಪ್ರಮುಖವಾಗಿ ವಿಠ್ಠಲ್, ಗಿರಿ, ರಾಜ್ಪಾಲ್ ಎಂಬುವರನ್ನ ರಾಮನಗರ ಎಸ್ಪಿ ಶ್ರೀನಿವಾಸ್ ಗೌಡ ಹಾಗೂ ಇತರೆ ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ. ರಿಕ್ಕಿ ರೈಗೆ ಅಷ್ಟೆಲ್ಲಾ ಟೈಟ್ ಸೆಕ್ಯುರಿಟಿ ಇದ್ದರೂ ಸಹ ಅದ್ಯಾವ ರೀತಿ ಅವತ್ತು ರಾತ್ರಿ ಫೈರಿಂಗ್ ಆಯ್ತು..? ಅದರಲ್ಲಿಯೂ ರಿಕ್ಕಿ ಜೊತೆಗೆ ಗನ್ ಮೆನ್ಗಳಿದ್ರು ಸಹ ಯಾರಿಗೆ ಅಷ್ಟು ಧೈರ್ಯ ಬಂತು..? ಎಂಬ ಪ್ರಶ್ನೆ ಪೊಲೀಸರಲ್ಲಿ ಮೂಡಿದೆ.

ರಿಕ್ಕಿ ರೈ ಜೊತೆಯಲ್ಲಿ ಇದ್ದವರೆ ಗೇಮ್ ಮಾಡಿದ್ದಾರೆ ಎಂ ಗುಮಾನಿ ಸಹ ವ್ಯಕ್ತವಾಗಿದೆ. ಇನ್ನು ಗನ್ ಮೆನ್ಗಳನ್ನ ಕರೆದು ವಿಚಾರಣೆ ಮಾಡ್ತಿದ್ದಂತೆ, ಅವರ ಕುಟುಂಬ ಸದಸ್ಯರನ್ನೂ ಸಹ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ವಿಠ್ಠಲ್ ಪತ್ನಿ ಭೋಜಮ್ಮರನನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿದ್ದಾರೆ. ಗನ್ ಮ್ಯಾನ್ ವಿಠ್ಠಲ್ ಪುತ್ರ ವಿನಯ್ ದೇವಯ್ಯನನ್ನ ಸಹ ಪೊಲೀಸರು ವಿಚಾರಣೆ ಮಾಡಿದ್ದಾರೆ.

ರಿಕ್ಕಿ ರೈ ಆಪ್ತರನ್ನ ವಿಚಾರಣೆ ಮಾಡ್ತಿದ್ದಂತೆ ಬಿಡದಿ ಠಾಣೆಗೆ ಭೇಟಿ ನೀಡಿದ ರಿಕ್ಕಿ ಪರ ವಕೀಲ ನಾರಾಯಣಸ್ವಾಮಿ ಭೇಟಿ ನೀಡಿ ಪೊಲೀಸರಿಂದ ಮಾಹಿತಿ ಪಡೆದಿದ್ದಾರೆ. ಗುಂಡು ಹೊಡೆಯಲು ಆಪ್ತರೇ ಸಹಾಯ ಮಾಡಿದ್ದಾರೆ ಎನ್ನುವ ಗುಮಾನಿ ಬಂದಿದೆ. ಈ ನಡುವೆ ರಿಕ್ಕಿ ರೈ ಚಿಕ್ಕಮ್ಮ ಅನುರಾಧ, ವಿದೇಶದಲ್ಲಿದ್ದು, ಕರ್ನಾಟಕ ಹೈಕೋರ್ಟ್ಗೆ ಜಾಮೀನು ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಚಿಕ್ಕಮ್ಮನ ಮೇಲೆ ರಿಕ್ಕಿ ರೈ ಕೂಡ ಅನುಮಾನ ವ್ಯಕ್ತಪಡಿಸಿದ್ದರು. ಇದ್ರ ಬೆನ್ನಲ್ಲೇ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.