ದೇಶದೆಲ್ಲೆಡೆ ಚರ್ಚೆಯ ಕಿಚ್ಚು ಹೆಚ್ಚಿದ್ದ ವಕ್ಫ್ ತಿದ್ದುಪಡಿ ಮಸೂದೆ (Waqf amendment act) ಅಂತಿಮವಾಗಿ ಲೋಕಸಭೆ (Lok sabha) ಮತ್ತು ರಾಜ್ಯಸಭೆ (Rajya sabha) ಎರಡೂ ಸದನಗಳಲ್ಲಿಯೂ ಅಂಗೀಕಾರಗೊಂಡ ನಂತರ ಇದೀಗ ಈ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (Drowpadi murmu) ಅವರ ಅಂಕಿತ ಕೂಡ ಆಗಿದೆ.

ಹೌದು ಭಾರಿ ಚರ್ಚೆ, ಸದ್ದು ಗದ್ದಲದ ಬಳಿಕ ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿದ್ದ ವಕ್ಫ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದೌಪದಿ ಮುರ್ಮು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇನ್ನೇನಿದ್ದರೂ ಸರ್ಕಾರದ ಅಧಿಸೂಚನೆ ಹೊರಬಿದ್ದರೆ, ಈ ಬಿಲ್ ಕಾನೂನು ರೂಪದಲ್ಲಿ ಜಾರಿಗೆ ಬರಲಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ ವಕ್ಫ್ ಬೋರ್ಡ್ ಗೆ ಇದ್ದ ಅಧಿಕಾರವನ್ನು ಕಡಿತಗೊಳಿಸಿ ದೇಶದ ಬಡ ಮುಸ್ಲಿಮರಿಗೆ ನ್ಯಾಯ ಒದಗಿಸುತ್ತಿದ್ದೇವೆ ಎಂದಿದೆ. ಆದ್ರೆ ಈ ತಿದ್ದುಪಡಿಗಳು ನಮ್ಮ ಧರ್ಮಕ್ಕೆ ವಿರುದ್ಧವಾಗಿವೆ ಎಂದು ಮುಸ್ಲಿಂ ಸಮುದಾಯ ಅಸಮಾಧಾನ ವ್ಯಕ್ತಪಡಿಸಿದ್ದು ಈಗಾಗಲೇ ಇದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.