ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ (Vinay somayya) ಆತ್ಮಹತ್ಯೆ ರಾಜ್ಯ ರಾಜಕಾರಣದಲ್ಲಿ ಕಿಡಿ ಹೊತ್ತಿಸಿದ್ದು, ಈ ಪ್ರಕರಣ ಸಂಬಂಧ ಹೆಣ್ಣೂರು ಪೊಲೀಸರು ತನಿಖೆ ಶುರು ಮಾಡಿದ್ದಾರೆ.ಈಗಾಗಲೇ ವಿನಯ್ ಸೋಮಯ್ಯ ಮೊಬೈಲ್ ವಶಕ್ಕೆ ಪಡೆದು ರಿಟ್ರೀವ್ ಗೆ ಕಳುಹಿಸಲಾಗಿದೆ.

ವಿನಯ್ ಸೋಮಯ್ಯ ಬರೆದಿದ್ದ ಡೆತ್ ನೋಟ್ (Death note) ಎಫ್.ಎಸ್.ಎಲ್ ಗೆ (FSL) ರವಾನೆ ಮಾಡಲಾಗಿದೆ. ವಾಟ್ಸಾಪ್ ಗ್ರೂಪ್ ನಲ್ಲಿ (Whatsapp group) ನಡೆದಿರುವ ಚರ್ಚೆಗಳ ಬಗ್ಗೆ ಪರಿಶೀಲನೆ ನಡೆಸಬೇಕಿರುವ ಹಿನ್ನಲ್ಲೇ ಮೊಬೈಲ್ ರಿಟ್ರೀವ್ ಮಾಡಲು ಮುಂದಾಗಿದ್ದಾರೆ.
ಇನ್ನು ಮತ್ತೊಂದೆಡೆ ವಿನಯ್ ಡೆತ್ ನೋಟ್ ನಲ್ಲಿ ಉಲ್ಲೇಖಿಸಿರುವಂತೆ ಆರೋಪಿ ತನ್ನೀರ ಮಹೀನಾ ಗೆ ನೊಟೀಸ್ ನೀಡಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.ತನ್ನ ಸಾವಿಗೆ ತನ್ನೀರಾ ಮಹೀನಾ ನೇರ ಕಾರಣ ಎಂದು ವಿನಯ್ ಆರೋಪಿಸಿದ್ದು, ಈ ಕಾರಣ ನೊಟೀಸ್ ನೀಡಿ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.






