ಕಾಂಗ್ರೆಸ್ ಸರ್ಕಾರದ (Congress guarantee) ಗ್ಯಾರೆಂಟಿಗಳು ರಾಜ್ಯದ ಜನರ ಪಾಲಿಗೆ ವರವೋ ಶಾಪವೋ ಎಂಬಂತಾಗಿದೆ. ಯಾಕಂದ್ರೆ ದಿನನಿತ್ಯ ರಾಜ್ಯದ ಜನರಿಗೆ ಬೆಲೆ ಏರಿಕೆಯ ಬಿಸಿ ಹೆಚ್ಚಾಗುತ್ತಲೇ ಇದೆ.

ರಾಜ್ಯದಲ್ಲಿ ಈಗಾಗಲೇ ವಿದ್ಯುತ್ ದರ (current bill) , ಕಸದ ಸೆಸ್, ವಾಹನದ ಮೇಲಿನ ಟ್ಯಾಕ್ಸ್ ಎಲ್ಲವೂ ಹೆಚ್ಚಳವಾಗಲಿದ್ದು, ಈ ಬೆನ್ನಿಗೆ ಡೀಸೆಲ್ ದರ ಏರಿಕೆ ಕೂಡ ರಾಜ್ಯದ ಜನರ ನಿದ್ದೆಗೆಡಿಸಿದೆ. ಹೀಗಾಗಿ ವಿರೋಧ ಪಕ್ಷವಾದ ಬಿಜೆಪಿ ಸರ್ಕಾರದ ವಿರುದ್ಧ ಇಂದು ಬೀದಿಗಿಳಿದು ಹೋರಾಟಕ್ಕೆ ಮುಂದಾಗಿದೆ.

ಇಂದು ಫ್ರೀಡಂ ಪಾರ್ಕ್ ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹಾಗೂ ಇನ್ನುಳಿದ ನಾಯಕರ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿದೆ.
ಈ ವೇಳೆ ಸರ್ಕಾರದ ವಿರುದ್ಧ ಕಿಡಿಕಾರಿದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹಾಲಿನ ದರ ಏರಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಹಾಲಿನ ಟ್ಯಾಂಕರ್ ಅನ್ನು ಎತ್ತಿಹಿಡಿಯುವ ಮೂಲಕ ಸರ್ಕಾರದ ಬೆಲೆ ಏರಿಕೆಯ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.