ಈಗಾಗಲೇ ಐಪಿಎಲ್ 2025 ರ (IPL 2025) ಫೀವರ್ ದೇಶಾದ್ಯಂತ ಆರಂಭವಾಗಿದ್ದು, ಈಗಾಗಲೇ 12 ಪಂದ್ಯಗಳು ನಡೆದಿವೆ. ರಾಜಧಾನಿ ಬೆಂಗಳೂರಲ್ಲೂ (Bengaluru) ಇನ್ನಷ್ಟೇ ಪಂದ್ಯಗಳು ನಡೆಯಬೇಕಿದ್ದು ಕಾತುರತೆ ಮತ್ತು ಸಿದ್ಧತೆ ಜೋರಾಗಿದೆ.

ಹೀಗಾಗಿ ಐಪಿಎಲ್ ಪಂದ್ಯಗಳಿಗೆ ಬೆಂಗಳೂರು ನಗರ ಸಜ್ಜಾಗುತ್ತಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy stadium) ಐಪಿಎಲ್ ಪಂದ್ಯಗಳು ನಡೆಯುವ ದಿನಗಳಲ್ಲಿ, ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಲಿದ್ದು, ಪ್ರಯಾಣಿಕರ ಅನುಕೂಲಕ್ಕೆ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲು ಬಿಎಂಟಿಸಿ ನಿರ್ಧರಿಸಿದೆ.
ಹೌದು, ಏಪ್ರಿಲ್ 02, 10, 18, 24 ಹಾಗೂ ಮೇ 03, 13, 17 ರಂದು ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಗಳು ನಡೆಯಲಿವೆ. ಹೀಗಾಗಿ ಕ್ರಿಕೆಟ್ ಪ್ರೇಮಿಗಳ ಅನುಕೂಲಕ್ಕೆ ಚಿನ್ನಸ್ವಾಮಿ ಸ್ಟೇಡಿಯಂನಿಂದ ಬಿಎಂಟಿಸಿ ಸ್ಪೆಷಲ್ ಬಸ್ ವ್ಯವಸ್ಥೆ ಮಾಡಿದೆ.

ಐಪಿಎಲ್ ಪಂದ್ಯ ಮುಗಿದ ನಂತರ ಮನೆಗೆ ಹೋಗುವ ಸಾರ್ವಜನಿಕರಿಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಕಾಡುಗೋಡಿ,ಹೆಚ್‌ಎಎಲ್,ಸರ್ಜಾಪುರ,ಎಲೆಕ್ಟ್ರಾನಿಕ್ ಸಿಟಿ,ಹೊಸೂರು ರಸ್ತೆ,ಬನ್ನೇರುಘಟ್ಟ,ಮಾಗಡಿ ರಸ್ತೆ, ಯಲಹಂಕ,ನಾಗವಾರ,ಹೊಸಕೋಟೆ,ಬನಶಂಕರಿ ಸೇರಿದಂತೆ ವಿವಿಧ ಪ್ರದೇಶಗಳಿಗೆ ಸಾರಿಗೆ ವ್ಯವಸ್ತೆ ಕಲ್ಪಿಸಲಾಗುತ್ತಿದೆ.