• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಮುಸ್ಲಿಮರ ಮೇಲೆ ಕೆಂಡ ಕಾರುವ ಬಿಜೆಪಿಗೆ ಮಮಕಾರ ಏಕೆ..?

ಕೃಷ್ಣ ಮಣಿ by ಕೃಷ್ಣ ಮಣಿ
March 26, 2025
in ಕರ್ನಾಟಕ, ರಾಜಕೀಯ
0
Share on WhatsAppShare on FacebookShare on Telegram

ಕರ್ನಾಟಕ ಸರ್ಕಾರ ಗುತ್ತಿಗೆ ಕಾಮಗಾರಿಗಳಲ್ಲಿ ಹಿಂದುಳಿದವರಿಗೆ (ಮುಸ್ಲಿಮರಿಗೆ) 4 ಪರ್ಸೆಂಟ್​​ ಮೀಸಲಾತಿ ಕೊಡುವ ನಿರ್ಧಾರ ಪ್ರಕಟ ಮಾಡುತ್ತಿದ್ದ ಹಾಗೆ ಸಿಡಿದು ಕೆಂಡ ಕಾರಿದ ಬಿಜೆಪಿ, ಇದು ಓಲೈಕೆ ರಾಜಕಾರಣ ಎಂದು ಆರೋಪ ಮಾಡಿತ್ತು. ಸದನದಲ್ಲಿ ಪ್ರತಿಭಟನೆಯನ್ನೂ ಮಾಡಿತ್ತು. ರಾಜ್ಯಪಾಲರನ್ನೂ ಭೇಟಿ ಮಾಡಿ ಅವಕಾಶ ಕೊಡದಂತೆ ಮನವಿ ಮಾಡಿತ್ತು. ಆದ್ರೆ ಇದೀಗ ಕೇಸರಿ ಪಡೆ ದೇಶಾದ್ಯಂತ ಮುಸ್ಲಿಮರಿಗೆ ರಂಜಾನ್​​ ಗಿಫ್ಟ್ ಘೋಷಿಸಿದೆ. ಅದು ಕೂಡ ಪ್ರಧಾನಿ ನರೇಂದ್ರ ಮೋದಿ ಅವ್ರ ಹೆಸರಲ್ಲಿ ಅನ್ನೋದು ವಿಶೇಷ.

ADVERTISEMENT

ಮುಸ್ಲಿಂ ಸಮುದಾಯಕ್ಕೆ 4 ಪರ್ಸೆಂಟ್​ ಗುತ್ತಿಗೆ​ ಮೀಸಲಾತಿ ಕೊಡಲು ತೀರ್ಮಾನ ಆಗ್ತಿದ್ದಂತೆ ತೀವ್ರವಾಗಿ ಖಂಡಿಸಿದ ಬಿಜೆಪಿ, ಕಾಂಗ್ರೆಸ್​ ಸರ್ಕಾರದ ಬಜೆಟ್‌ ಹಲಾಲ್‌ ಬಜೆಟ್‌‌, ಪಾಕಿಸ್ತಾನ್ ಬಜೆಟ್‌ ಎಂದು ಟೀಕೆಗಳ ಸುರಿಮಳೆ ಸುರಿಸಿದ್ರು. ಪ್ರತಿಭಟನೆನೂ ಮಾಡಿ ಅಸಂವಿಧಾನಕ ತೀರ್ಮಾನ ಅಂತ ವಾಗ್ದಾಳಿ ಮಾಡಿದ್ರು.. ಮುಸ್ಲಿಮರ ವಿಚಾರದಲ್ಲಿ ಬಿಜೆಪಿ ಕೆಂಡ ಕಾರ್ತಿದ್ರೆ, ಅತ್ತ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹೆಸರಲ್ಲಿ ರಾಷ್ಟ್ರೀಯ ಬಿಜೆಪಿ ನಾಯಕರು ಮುಸ್ಲಿಂ ಸಮುದಾಯಕ್ಕೆ ರಂಜಾನ್​ ಗಿಫ್ಟ್​ ಕೊಟ್ಟಿದ್ದಾರೆ. 32 ಲಕ್ಷ ಬಡ ಮುಸ್ಲಿಮರಿಗೆ ‘ಸೌಗತ್-ಇ-ಮೋದಿ’ ಕಿಟ್‌ ವಿತರಣೆ ಮಾಡ್ತಿದೆ ರಾಷ್ಟ್ರೀಯ ಬಿಜೆಪಿ ಮೈನಾರಿಟಿ ಸೆಲ್.


​
ಆರ್ಥಿಕವಾಗಿ ದುರ್ಬಲವಾಗಿರುವ ಮುಸ್ಲಿಂ ಕುಟುಂಬಗಳು ಯಾವುದೇ ತೊಂದರೆಯಿಲ್ಲದೇ, ಈದ್ ಆಚರಿಸಬೇಕು. ಅದಕ್ಕಾಗಿ ‘ಸೌಗತ್-ಇ-ಮೋದಿ’ ಹೆಸರಿನಲ್ಲಿ ವಿಶೇಷ ಕಿಟ್​ ವಿತರಿಸೋಕೆ ಕೇಂದ್ರ ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ.. ದೇಶಾದ್ಯಂತ 32 ಲಕ್ಷ ಬಡ ಮುಸ್ಲಿಂ ಕುಟುಂಬಗಳಿಗೆ ಹಬ್ಬದ ವಿಶೇಷ ಕಿಟ್ ತಲುಪಿಸ್ತಿದೆ.. ​

MahimaPatel:ಮೋದಿ ಪತ್ರಕರ್ತರಿಗೆ ಉತ್ತರ ಕೊಡಲು ಸಾಧ್ಯವಿಲ್ಲ..? #media #channel #narendramodi #siddaramaiah

ರಂಜಾನ್​ ಹಿನ್ನೆಲೆ ಮುಸ್ಲಿಂ ಸಮುದಾಯಕ್ಕೆ ಕೇಂದ್ರ ಬಿಜೆಪಿ ನಾಯಕರು ಅಲ್ಪಸಂಖ್ಯಾತ ವಿಭಾಗದಿಂದ ಸೌಗತ್-ಇ-ಮೋದಿ ಹೆಸರಿನಲ್ಲಿ ವಿಶೇಷ ಗಿಫ್ಟ್​ ಕೊಡ್ತಿದ್ದಾರೆ.. ದೇಶಾದ್ಯಂತ 32​​ ಲಕ್ಷ ಬಡ ಮುಸ್ಲಿಂರಿಗೆ ವಿಶೇಷ ಕಿಟ್​ ಸಿಗಲಿದೆ.. ​ಸೌಗತ್ ಇ ಮೋದಿ ಕಿಟ್​​ನಲ್ಲಿ ಆಹಾರ ಪದಾರ್ಥಗಳ ಜೊತೆಗೆ ಬಟ್ಟೆ, ಹಬ್ಬಕ್ಕೆ ಬೇಕಾದ ಸಾವಿಗೆ, ಖರ್ಜೂರ, ಡ್ರೈ ಫ್ರೂಟ್ಸ್​​​​​​ ಮತ್ತು ಸಕ್ಕರೆ ಇರಲಿದೆ. ​​ಮಹಿಳೆಯರಿಗೆ ನೀಡಲಾಗುವ ಕಿಟ್​ನಲ್ಲಿ ಕುರ್ತಾ-ಪೈಜಾಮ, ಪುರುಷರ ಕಿಟ್‌ನಲ್ಲಿ ಸೂಟ್ ಬಟ್ಟೆ ಇರಲಿದೆ.. 32 ಸಾವಿರ ಮಸೀದಿಗಳ ಮೂಲಕ ದೇಶಾದ್ಯಂತ ಬಡ ಮುಸ್ಲಿಂ ಕುಟುಂಬಗಳಿಗೆ ಕಿಟ್​​ ತಲುಪಿಸುವ ಗುರಿ ಹೊಂದಲಾಗಿದೆ..

ಬೃಹತ್​ ಅಭಿಯಾನಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ದೆಹಲಿಯ ನಿಜಾಮುದ್ದೀನ್‌ನಲ್ಲಿ ಚಾಲನೆ ನೀಡಿದ್ದಾರೆ. ಸೌಗತ್-ಇ-ಮೋದಿ ಅಭಿಯಾನದ ಬಗ್ಗೆ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಜಮಾಲ್ ಸಿದ್ದಿಕಿ ಮಾತನಾಡಿ, ಈದ್, ಬೈಸಾಖಿ, ಗುಡ್ ಫ್ರೈಡೇ​​, ಭಾರತೀಯ ಹೊಸ ವರ್ಷ ಬರ್ತಿದೆ. ಪ್ರಧಾನಿ ನರೇಂದ್ರ ಮೋದಿ ಪರವಾಗಿ ಕಿಟ್‌ ಕೊಡ್ತಿದ್ದೀವಿ. ‘ಸೌಗಾತ್-ಇ-ಮೋದಿ’ ಕಿಟ್​ನಲ್ಲಿ ಆಹಾರ ಪದಾರ್ಥಗಳು ಇರಲಿವೆ. ಮನೆಯ ಯಜಮಾನಿಗೆ ಒಂದು ಸೂಟ್ ವಸ್ತು ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳನ್ನು ಹೊಂದಿದೆ ಎಂದಿದ್ದಾರೆ. ಇದು ಮುಸ್ಲಿಮರನ್ನು ಓಲೈಕೆ ಮಾಡುವ ಕೆಲಸ ಅಲ್ಲವೇ ಎಂದು ಕಾಂಗ್ರೆಸ್​ ಟೀಕಿಸಿದೆ.

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಹೋಂ ಮಿನಿಸ್ಟರ್ ಗೆ ರಾಜಣ್ಣ ದೂರು.. ಆದೇಶ ಇಂದೇ ಹೊರಬೀಳುತ್ತಾ..?

Next Post

ನಾನು ಜೈಲಿನಲ್ಲಿ ಇದ್ದಾಗ ಪೇಪರ್‌ನಲ್ಲಿ ಆ ಸುದ್ದಿ ಓದಿದ್ದೆ..!

Related Posts

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ
ಅಭಿಮತ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

by ಪ್ರತಿಧ್ವನಿ
April 27, 2026
0

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ 'ಗ್ಲೋಬಲ್ ರಾಜಸ್ಥಾನ ಅಗ್ರಿಟೆಕ್ ಮೀಟ್ 2026' ಅಂಗವಾಗಿ ಬೆಂಗಳೂರಿನ ರೋಡ್ ಶೋನಲ್ಲಿ ಹೂಡಿಕೆಗೆ ಕೈಗಾರಿಕೆಗಳ ಆಸಕ್ತಿ...

Read moreDetails
ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?

ರಾಜಕೀಯದ ಬಗ್ಗೆ ಮುಂದಿನ ದಿನಗಳಲ್ಲಿ ಮೌನ: ಸಮಯ ಬಂದಾಗ ತಾನಾಗಿಯೇ ಸ್ಪಷ್ಟವಾಗುತ್ತದೆ – ಡಿಸಿಎಂ ಡಿ.ಕೆ. ಶಿವಕುಮಾರ್

April 26, 2026
ಎಎಪಿ ತೊರೆದು ಬಿಜೆಪಿಗೆ ರಾಘವ್ ಚಡ್ಡಾ: ಆಸ್ತಿ ವಿವರ ಇಲ್ಲಿದೆ!

ಎಎಪಿ ತೊರೆದು ಬಿಜೆಪಿಗೆ ರಾಘವ್ ಚಡ್ಡಾ: ಆಸ್ತಿ ವಿವರ ಇಲ್ಲಿದೆ!

April 26, 2026
ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

April 26, 2026
ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

April 25, 2026
Next Post

ನಾನು ಜೈಲಿನಲ್ಲಿ ಇದ್ದಾಗ ಪೇಪರ್‌ನಲ್ಲಿ ಆ ಸುದ್ದಿ ಓದಿದ್ದೆ..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada