ರಾಜ್ಯ ರಾಜಕಾರಣದಲ್ಲಿ ಹನಿ ಟ್ರ್ಯಾಪ್ (Honey trap) ಪ್ರಕರಣ ಗದ್ದಲ ಕೋಲಾಹಲ ಎಬ್ಬಿಸಿದೆ.ಯಾವುದೇ ಪಕ್ಷದ ಮಿತಿಯಿಲ್ಲದೆ ಪಕ್ಷಾತೀತವಾಗಿ ಈ ಹನಿ ಟ್ರ್ಯಾಪ್ ವಿರುದ್ಧ ರಾಜಕಾರಣಿಗಳು ಆಕ್ರೋಶ ವ್ಯಕ್ತಪಡಿಸಿದ್ದು ಖುದ್ದು ವಿಧಾನಸಭೆಯಲ್ಲಿ ಈ ಬಗ್ಗೆ ಶಾಸಕರು, ಸಚಿವರು ಉಲ್ಲೇಖಿಸಿದ್ದಾರೆ.

ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ (Dcc Dk Shivakumar) ಪ್ರತಿಕ್ರಿಯಿಸಿದ್ದು, ನನಗೆ ಆ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ, ಈಗ ಆರೋಪಗಳು ಕೇಳಿ ಬರುತ್ತಿವೆ. ಎಲ್ಲರೂ ಸುಮನ್ನೆ ಗಾಳಿಯಲ್ಲಿ ಗುಂಡು ಹೊಡೆಯೋದು ಬೇಡ. ಯಾರಿಗೆ ಈ ರೀತಿಯಾಗಿದೆ ಮೊದಲು ಅವರು ದೂರು ನೀಡಲಿ, ತನಿಖೆಯಾಗಲಿ ಎಂದು ಹೇಳಿದ್ದಾರೆ.

ಈ ಕುರಿತು ಈ ಬಗ್ಗೆ ಅಧಿವೇಶನದಲ್ಲಿ ಇಂದು ಗದ್ದಲ ಎಬ್ಬಿಸಿದ ಬಿಜೆಪಿ, ಸದಾಶಿವ ನಗರದಲ್ಲಿರುವ ಸಿಡಿ ಫ್ಯಾಕ್ಟರಿಯನ್ನು ಬಂದ್ ಮಾಡಬೇಕು ಎಂದು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.