ಅಹಮದಾಬಾದ್: ಅಯೋಧ್ಯೆಯ ಶ್ರೀರಾಮ ಮಂದಿರ (Ayodhya Rama Mandira) ಮಾದರಿಯಲ್ಲೇ ಭವ್ಯ ಸೀತಾ ಮಾತಾ ಮಂದಿರ ನೀರ್ಮಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ..

ಶಾಶ್ವತ ಮಿಥಿಲಾ ಮಹೋತ್ಸವ- 2025 (Eternal Mithila Festival) ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಿಥಿಲಾಚಲ ಹಾಗೂ ಬಿಹಾರದ ಜನರು ವಲಸೆ ಬಂದು ಗುಜರಾತ್‌ನಲ್ಲಿ ಜೀವನ ರೂಪಿಸಿಕೊಂಡಿದ್ದಾರೆ. ಅವರಿಂದ ಗುಜರಾತ್ (Gujarat) ಅಭಿವೃದ್ದಿಗೆ ದೊಡ್ಡ ಕೊಡುಗೆ ಸಿಕ್ಕಿದೆ ಎಂದು ಹೇಳಿದ್ದರು..

ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಹಾರಕ್ಕೆ ತೆರಳಿದಾಗ ಸೀತಾಮಾತೆಯ ಮಂದಿರ ನಿರ್ಮಾಣದ ಭರವಸೆ ನೀಡಿದ್ದೆ. ಅದನ್ನು ಸಕಾರೊಳಿಸುವ ಸಮಯ ಈಗ ಬಂದಿದೆ. ಅಯೋಧ್ಯೆಯ ರಾಮಮಂದಿರ ಮಾದರಿಯಲ್ಲೇ ಬಿಹಾರದಲ್ಲಿ ಸೀತಾಮಾತೆಯ ಮಂದಿರ ನಿರ್ಮಾಣ ಮಾಡಲಾಗುವುದು. ಈ ಮಂದಿರವು ದೇಶದ ನಾರಿ ಶಕ್ತಿಯ ಪ್ರತೀಕವಾಗಿ ವಿಶ್ವದ ಗಮನ ಸೆಳೆಯಲಿದೆ ಅಂದು ಅಮಿತ್ ಶಾ ಹೇಳಿದ್ದಾರೆ..