ಬೆಂಗಳೂರು: ನಟಿ ರನ್ಯಾ ರಾವ್ (Ranya Rao) ಗೋಲ್ಡ್ ಸ್ಮಗ್ಲಿಂಗ್ ಕೇಸ್ನಲ್ಲಿ ಸಚಿವರ ಪಾತ್ರವಿದ್ದರೆ ಅವರ ಹೆಸರು ಹೇಳಲಿ ಎಂದು ಬಿಜೆಪಿ (BJP) ಆರೋಪಕ್ಕೆ ಕಾಂಗ್ರೆಸ್ (Congress) ಸಚಿವರು ತಿರುಗೇಟು ನೀಡಿದ್ದಾರೆ.

ವಿಧಾನಸೌಧದಲ್ಲಿ ರನ್ಯಾ ರಾವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ (Chaluvarayaswamy) ಅವರು, ಈ ಪ್ರಕರಣದಲ್ಲಿ ಸಚಿವರ ಪಾತ್ರವಿದ್ದರೆ ಅವರ ಹೆಸರು ಹೇಳಲಿ, ಈಗಾಗಲೇ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಟ್ಟಿದ್ದಾರೆ. ತನಿಖೆ ಆಗಲಿ, ಎಲ್ಲವೂ ಹೊರಗೆ ಬರಲಿ. ಬಿಜೆಪಿ, ಜೆಡಿಎಸ್ನವರು ಟೀಕೆ ಮಾಡುತ್ತಿದ್ದಾರೆ. ಆದರೆ ಅವರು ಹೇಳಿದ್ರಲ್ಲಿ ಯಾವುದೂ ಸತ್ಯವಿಲ್ಲ ಎಂದರು.

ಇದೇ ವೇಳೆ ಸಚಿವ ಶಿವರಾಜ್ ತಂಗಡಗಿ (Shivraj Thangadgi) ಮಾತನಾಡಿ, ಬಿಜೆಪಿ ಅವರಿಗೆ ಕೆಲಸ ಏನಿದೆ? ತನಿಖೆ ಆಗುತ್ತಿದೆ. ಯಾರು ತಪ್ಪಿತಸ್ಥರು ಅವರಿಗೆ ಶಿಕ್ಷೆ ಆಗುತ್ತದೆ. ಸಿಎಂ ಸಿದ್ದರಾಮಯ್ಯ (CM Siddamaiah) ಅವರಿಂದ ಪರಮೇಶ್ವರ್ವರೆಗೂ ಯಾರೂ ಸಪೋರ್ಟ್ ಮಾಡಲ್ಲ. ಕಾಂಗ್ರೆಸ್ನ ಯಾರೂ ಕೂಡ ಇದಕ್ಕೆ ಸಪೋರ್ಟ್ ಮಾಡುವ ಮಾತೇ ಇಲ್ಲ. ತಪ್ಪಿತಸ್ಥರು ಯಾರಿದ್ದಾರೆ ಅವರಿಗೆ ಶಿಕ್ಷೆ ಆಗಬೇಕು ಎಂದು ತಿರುಗೇಟು ನೀಡಿದರು.
