ಬೆಂಗಳೂರು: ಶಕ್ತಿ ಯೋಜನೆಗೆ (Shakti Scheme) ಬಜೆಟ್‌ನಲ್ಲಿ 5,300 ಕೋಟಿ ರೂ. ಅನುದಾನನ್ನು ಮೀಸಲಿಡಲಾಗಿದೆ.

ತಮ್ಮ ಬಜೆಟ್ ಭಾಷಣದಲ್ಲಿ ಸಿದ್ದರಾಮಯ್ಯ (Siddaramaiah) ಮಹಿಳೆಯರ ಸಬಲೀಕರಣಕ್ಕಾಗಿ ಮತ್ತು ಸಾಮರ್ಥ್ಯ ವೃದ್ಧಿಗಾಗಿ ಪ್ರಪ್ರಥಮವಾಗಿ ಜಾರಿಗೆ ತರಲಾಗಿರುವ ʻಶಕ್ತಿʼ ಯೋಜನೆಯಡಿ ಪ್ರಸಕ್ತ ವರ್ಷ ಇದುವರೆಗೆ ಒಟ್ಟು 226.53 ಕೋಟಿ ಮಹಿಳಾ ಪ್ರಯಾಣಿಕರು ಸೌಲಭ್ಯ ಪಡೆದಿರುತ್ತಾರೆ.

ಮಹಿಳೆಯರ ಸ್ವಾವಲಂಬನೆ ಮತ್ತು ಆರ್ಥಿಕ ಅಭಿವೃದ್ಧಿಗೆ ಶಕ್ತಿ ತುಂಬಿದ ಈ ಯೋಜನೆಗಾಗಿ 2024-25 ನೇ ಸಾಲಿನಲ್ಲಿ 5,015 ಕೋಟಿ ರೂ. ವೆಚ್ಚ ಭರಿಸಲಾಗಿದ್ದು, 2025-26ನೇ ಸಾಲಿಗೆ 5,300 ಕೋಟಿ ರೂ. ಒದಗಿಸಲಾಗಿರುತ್ತದೆ ಎಂದು ತಿಳಿಸಿದರು.