
ಧರ್ಮಸ್ಥಳದ ಸೌಜನ್ಯ ಕೊಲೆ ಆರೋಪಿಗಳ ಪತ್ತೆ ಮಾಡ್ಬೇಕು, ಇದರಲ್ಲಿ ಯಾರೆಲ್ಲಾ ಆರೋಪಿಗಳು ಅನ್ನೋ ಬಗ್ಗೆ ಸವಿಸ್ತಾರವಾಗಿ ವಿಡಿಯೋ ಮಾಡಿದ್ದ ಯೂಟ್ಯೂಬರ್ ಕರ್ನಾಟಕ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದ. ಸಮಾಜದಲ್ಲಿ ಅಶಾಂತಿ ಮೂಡಿಸುವ ಕೃತ್ಯ ಎನ್ನುವ ಕಾರಣ ಕೊಟ್ಟು ಸುಮೋಟೋ ಕೇಸ್ ದಾಖಲಿಸಿಕೊಳ್ಳಲಾಗಿತ್ತು. ಬುಧವಾರ ರಾತ್ರಿ ಬಂಧನಕ್ಕೂ ಪೊಲೀಸರು ತೆರಳಿದ್ದರು. ಇದೀಗ ಪೊಲೀಸ್ ಕ್ರಮಕ್ಕೆ ಹೈಕೋರ್ಟ್ ತಡೆ ನೀಡಿದೆ.
ಯೂಟ್ಯೂಬರ್ ಸಮೀರ್‌ಗೆ ಬಳ್ಳಾರಿ ಪೊಲೀಸರು ನೀಡಿದ್ದ ನೋಟಿಸ್‌ಗೆ ಹೈಕೋರ್ಟ್ ತಡೆ ನೀಡಿದೆ. ಪೊಲೀಸರ ನೋಟಿಸ್‌ಗೆ ತಡೆ ನೀಡ ಹೈಕೋರ್ಟ್ ಆದೇಶ ಮಾಡಿದೆ.. ತನಿಖಾಧಿಕಾರಿ ವಿರುದ್ಧ ಹೈಕೋರ್ಟ್ ಏಕಸದಸ್ಯ ಪೀಠ ಕಿಡಿಕಾರಿದ್ದು, ರಾಜ್ಯ ಸರ್ಕಾರದ ಅಧಿಸೂಚನೆಗೆ ವಿರುದ್ಧವಾಗಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ ಎಂದು ಪೀಠ ಕೆಂಡಾಮಂಲಡ ಆಗಿದೆ.

ಕಾನೂನಿನ ಪ್ರಕಾರ ನೋಟಿಸ್ ಜೊತೆಗೆ ಎಫ್‌ಐಆರ್ ಪ್ರತಿ ಲಗತ್ತಿಸಬೇಕು. ಇದನ್ನು ಪೊಲೀಸರು ಉಲ್ಲಂಘಿಸಿದ್ದಾರೆ. ಹೀಗಾಗಿ ಮುಂದಿನ ವಿಚಾರಣೆಯ ತನಕ ಪೊಲೀಸರ ನೋಟಿಸ್‌ಗೆ ತಡೆಯಾಜ್ಞೆ ನೀಡಿ ಹೈಕೋರ್ಟ್ ಆದೇಶ ಮಾಡಿದೆ. ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠದಿಂದ ಪೊಲೀಸ್ರ ನೋಟಿಸ್‌ಗೆ ತಡೆಯಾಜ್ಞೆ ಸಿಕ್ಕಂತಾಗಿದೆ. ವಿಚಾರಣೆ ಮಾರ್ಚ್ 12ಕ್ಕೆ ಹೈಕೋರ್ಟ್ನಲ್ಲಿ ನಡೆಯಲಿದೆ.

ಪೊಲೀಸರ ನೋಟಿಸ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಯೂಟ್ಯೂಬರ್ ಸಮೀರ್ ಅರ್ಜಿಯನ್ನು ಮಾನ್ಯ ಮಾಡಿದ ಹೈಕೋರ್ಟ್ ಏಕಸದಸ್ಯ ಪೀಠ, ಅರ್ಜಿ ವಿಚಾರಣೆ ನಡೆಸಿ ತಡೆಯಾಜ್ಞೆ ನೀಡಿದೆ. ಕಾನೂನು ಮೀರಿ ಕ್ರಮಕ್ಕೆ ಮುಂದಾಗಿದ್ದ ತನಿಖಾಧಿಕಾರಿಗೂ ಹೈಕೋರ್ಟ್ ಚಾಟಿ ಬೀಸಿದೆ.