
ಶಿವಮೊಗ್ಗದಲ್ಲಿ ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಜೆಡಿಎಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರದ ವಿರುದ್ದ ಜಿಲ್ಲಾ ಜೆಡಿಎಸ್ ಬೀದಿಗಿಳಿದು ಪ್ರತಿಭಟನೆ ಮಾಡಿದೆ. ಜಿಲ್ಲಾ ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ವಿರುದ್ದ ಪ್ರತಿಭಟನೆ ಮಾಡಿದ್ದು, ಪಂಚ ಗ್ಯಾರಂಟಿ ಯೋಜನೆಯನ್ನು ಸಮರ್ಪಕವಾಗಿ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿದೆ.
ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಯ ಹಣ ಬಿಡುಗಡೆ ಮಾಡದ ಹಿನ್ನಲೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೆಡಿಎಸ್ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಹೋರಾಟ ಮಾಡಿದ್ದು, ಹಲೋ ಮಿಸ್ಟರ್ ಸಿದ್ದರಾಮಯ್ಯ ಹೇಳಿದ್ದೇನು ಮಾಡಿದ್ದೇನು ಎಂದು ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ. ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ. ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ ಪ್ರಸನ್ನ ಕುಮಾರ್, ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್ ಮತ್ತಿತರರು ಭಾಗಿಯಾಗಿದ್ದರು.

ಇತ್ತ ಮಂಡ್ಯದಲ್ಲಿ ಮಾತನಾಡಿದ ಮಾಜಿ ಸಚಿವ ಸಿಎಸ್ ಪುಟ್ಟರಾಜು, ಚುನಾವಣೆ ಸಂದರ್ಭದಲ್ಲಿ ಮಾತ್ರ ಗೃಹಲಕ್ಷ್ಮಿ ಹಣ ಹಾಕ್ತಾರೆ. ಜನರು ಈ ಸರ್ಕಾರಕ್ಕೆ ಉಗಿಯುತ್ತಿದ್ದಾರೆ. ಉಚಿತ ಭಾಗ್ಯ ಪ್ರತಿ ತಿಂಗಳು 1 ನೇ ತಾರೀಖಿನಂದು ಹಾಕಬೇಕು.ಇಲ್ಲ ಉಸ್ತುವಾರಿ ಸಚಿವರು, ಶಾಸಕರ ಮನೆಯ ಮುಂದೆ ಅಡ್ಡಹಾಕಿ ಜೆಡಿಎಸ್ ಪ್ರತಿ ನಿತ್ಯ ಹೋರಾಟ ಮಾಡ್ತೇವೆ ಎಂದು ಎಚ್ಚರಿಸಿದ್ದಾರೆ.
ಗ್ಯಾರಂಟಿ ಮೂಲಕ ಮತ ತಗೊಂಡು ಇವಾಗ ಗ್ಯಾರಂಟಿ ಕೊಟ್ಟಿಲ್ಲ ಎಂದು ಪ್ರತಿ ನಿತ್ಯ ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ. ಮುಂದಿನ ದಿನಗಳಲ್ಲಿ ದೊಡ್ಡ ಹೋರಾಟ ಮಾಡ್ತೇವೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೂ ಇದಕ್ಕೂ ಸಂಬಂಧ ಏನು? ಇವರು ಏನು ಚೆಕ್ಗೆ ಸಹಿ ಹಾಕಬೇಕ? ನಾನು ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಸರ್ಕಾರ ಮಾಡಬೇಕು, ಸಿಎಂ ದುಡ್ಡು ಬಿಡುಗಡೆ ಮಾಡೋದು. ಹಿಂದೆ ಸರ್ಕಾರ ವಿವಿ ಕೊಟ್ಟಿತ್ತು ಅದನ್ನ ಮುಚ್ಚಲು ಹೋರಾಟಿದ್ದಾರೆ. ನಿಮಗೆ ಸರ್ಕಾರ ನಡೆಸಲು ತಾಕತ್ ಇಲ್ಲಂದ್ರೆ ಮನೆಗೆ ಹೋಗಿ ಬೇರೆಯವರು ಮಾಡ್ತಾರೆ ಎಂದು ಕಿಚಾಯಿಸಿದ್ದಾರೆ.
ಬಜೆಟ್ನಲ್ಲಿ ಮಂಡ್ಯ ಜಿಲ್ಲೆಗೆ ದೊಡ್ಡ ಮೊತ್ತದ ಹಣ ಕೊಡಿ ಎಂದಿರುವ ಪುಟ್ಟರಾಜು, ರಾಜ್ಯವನ್ನು ಕೆಟ್ಟ ಪರಿಸ್ಥಿತಿಗೆ ತೆಗೆದುಕೊಂಡ ಹೋಗ್ತಾರೆ. ಚನ್ನಪಟ್ಟಣ ಚುನಾವಣೆಯಲ್ಲಿ ಗೃಹಲಕ್ಷ್ಮಿ ಹಣ ಹಾಕಿದ್ರು. ಸಿಎಂ ಸಿದ್ದರಾಮಯ್ಯ ಫೈನಲ್.
ಮುಂದೆ ದೊಡ್ಡ ಹೋರಾಟ ಮಾಡ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ ಮಾಜಿ ಸಚಿವ ಸಿ.ಎಸ್ಪುಟ್ಟರಾಜು. ಮಂಡ್ಯದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದು ವ್ಯಂಗ್ಯವಾಡಿದ್ದಾರೆ.

ಗೃಹಲಕ್ಷ್ಮಿ ಹಣ ಎಲ್ಲಿ ? ಜನರು ಉಗಿಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮಂಡ್ಯ ಜನರು ಬುದ್ದಿ ಕಲಿಸುತ್ತಾರೆ? ಶಕ್ತಿ ಯೋಜನೆ ಮಹಿಳೆಯ ಗುದ್ದಾಟ ತಂದಿಟ್ಟಿದ್ದಿರಿ. ಬಸ್ ಗಳ ಸಮಸ್ಯೆಗಳನ್ನು ಜನರು ಎದುರಿಸುತ್ತಿದ್ದಾರೆ. ಅಧಿಕಾರಿಗಳನ್ನ ಸಂಕಷ್ಟಕ್ಕೆ ಸಿಲುಕಿಸಿದ್ದಿರಿ. ಗ್ಯಾರಂಟಿ ಸರಿಯಾಗಿ ಕೊಡದಿದ್ದರೆ ಜೆಡಿಎಸ್ ನಿಮ್ಮ ಮನೆಗೆ ಮುತ್ತಿಗೆ ಹಾಕ್ತೇವೆ. ದೇವೇಗೌಡ್ರು ನೇತೃತ್ವದಲ್ಲಿ ರಾಜ್ಯದ ಜನರ ಪರ ನಿಲ್ಲುತ್ತೇವೆ. ಹಾಲಿನ ಪ್ರೋತ್ಸಾಹ ಧನ 5 ರೂಪಾಯಿ ಕೊಡ್ತಿಲ್ಲ. ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಅಧಿಕಾರದ ದರ್ಪದಿಂದ ಮುಖ್ಯಮಂತ್ರಿ ಕುರ್ಚಿಗೆ ಗುದ್ದಾಟ ನಡೆಯುತ್ತಿದೆ. ಜನರಿಗೆ ನ್ಯಾಯ ಕೊಡಲ್ಲ, ಇವರು ಅಂಗಿ ಪಟ್ಟಿಗೆ ಕೈಹಾಕಿ ಹೋರಾಟ ಮಾಡ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.