ಮಹಾ ಕುಂಭಮೇಳದ (Maha Kumbh) ಅವಧಿಯಲ್ಲಿ ಮಹಾರಾಷ್ಟ್ರದ ಮೂರು ಎಕ್ಸ್‌ಪ್ರೆಸ್‌ವೇಗಳ ಮೂಲಕ ಹಾದು ಹೋಗುವ ವಾಹನಗಳ ಸಂಖ್ಯೆಯಲ್ಲಿ ದಾಖಲೆ ಸೃಷ್ಟಿಯಾಗಿದೆ. ಈ ವರ್ಷದ ಜನವರಿ-ಫೆಬ್ರವರಿ ಅವಧಿಯಲ್ಲಿ ಮೂರು ಹೆದ್ದಾರಿಗಳಲ್ಲಿ 40 ಲಕ್ಷ ವಾಹನಗಳು ಸಂಚರಿಸಿವೆ.

ಯುಪಿ ಎಕ್ಸ್‌ಪ್ರೆಸ್‌ವೇಸ್ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ ( UPEIDA ) ಹಂಚಿಕೊಂಡಿರುವ ಮಾಹಿತಿ ಪ್ರಕಾರ, ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇ, ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ ಮತ್ತು ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಮೂಲಕ 40 ಲಕ್ಷಕ್ಕೂ ಹೆಚ್ಚು ವಾಹನಗಳು ಹಾದು ಹೋಗಿವೆ. ಈ ಅವಧಿಯಲ್ಲಿ 564 ರಸ್ತೆ ಅಪಘಾತಗಳು ಸಂಭವಿಸಿದ್ದು, 40 ಜನರು ಸಾವನ್ನಪ್ಪಿದ್ದಾರೆ.

ಜನವರಿ 1 ರಿಂದ ಫೆಬ್ರವರಿ 28 ರವರೆಗೆ ದಾಖಲೆಯ 28.40 ಲಕ್ಷ ವಾಹನಗಳು ಆಗ್ರಾ ಲಕ್ನೋ ಎಕ್ಸ್‌ಪ್ರೆಸ್‌ವೇ ಮೂಲಕ ಹಾದು ಹೋಗಿವೆ. ಇದೇ ಅವಧಿಯಲ್ಲಿ 2024 ರಲ್ಲಿ ಸುಮಾರು 17 ಲಕ್ಷ ಮತ್ತು 2023 ರಲ್ಲಿ 16 ಲಕ್ಷದಷ್ಟು ವಾಹನಗಳು ಸಂಚರಿಸಿದ್ದವು. ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು ಶೇಕಡಾ 70 ರಷ್ಟು ಹೆಚ್ಚಿನ ವಾಹನಗಳು ಸಂಚರಿಸಿವೆ.

ಜನವರಿ-ಫೆಬ್ರವರಿಯಲ್ಲಿ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ ಮೂಲಕ ಸುಮಾರು 15.10 ಲಕ್ಷ ವಾಹನಗಳು ಹಾದು ಹೋಗಿವೆ. 2024 ರಲ್ಲಿ ಸುಮಾರು 10 ಲಕ್ಷ ವಾಹನಗಳು ಮತ್ತು 2023 ರಲ್ಲಿ 7 ಲಕ್ಷ ವಾಹನಗಳು ಈ ಎಕ್ಸ್‌ಪ್ರೆಸ್‌ವೇ ಮೂಲಕ ಹಾದು ಹೋಗಿದ್ದವು. ಮಹಾ ಕುಂಭಮೇಳದ ಸಮಯದಲ್ಲಿ 2.87 ಲಕ್ಷ ವಾಹನಗಳು ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಮೂಲಕ ಹಾದುಹೋದವು.

ವಾಹನಗಳ ಸಂಖ್ಯೆಯಲ್ಲಿ ಅನಿರೀಕ್ಷಿತ ಹೆಚ್ಚಳದಿಂದಾಗಿ, ಅತಿ ವೇಗ ಮತ್ತು ಅಪಘಾತಗಳು ಹೆಚ್ಚಾಗಿದ್ದು ಚಾಲನೆಯಲ್ಲಿ ಅಜಾಗರೂಕತೆ ಕಂಡುಬಂದಿದೆ. ಇದರ ಪರಿಣಾಮವಾಗಿ 564 ಅಪಘಾತಗಳಲ್ಲಿ 40 ಸಾವುಗಳು ಸಂಭವಿಸಿದ್ದು, 524 ಗಾಯಗಳಾಗಿವೆ. ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಅತಿವೇಗಕ್ಕಾಗಿ 8.45 ಲಕ್ಷಕ್ಕೂ ಹೆಚ್ಚು ಚಲನ್‌ಗಳನ್ನು ನೀಡಲಾಗಿದೆ. ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಯಲ್ಲಿ ಈ ಸಂಖ್ಯೆ 6.64 ಲಕ್ಷ ಕಾರ್‌ಗಳಿಗೆ ದಂಡ ವಿಧಿಸಿದೆ