ಡಿಸಿಎಂ ಡಿಕೆಶಿ (Dk Shivakumar) ನಟ್ಟು- ಬೋಲ್ಟ್ ಹೇಳಿಕೆಗೆ ವ್ಯಾಪಾಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್,ಟೀಕೆ ಮಾಡಲಿ ಎಂದೇ ನಾನು ಹೇಳಿರೋದು.ನಾನು ಎಷ್ಟು ಸಹಾಯ ಮಾಡಿದ್ದೇನೆ ಅನ್ನೋದು ನನಗೂ ಅವರಿಗೂ ಗೊತ್ತಿದೆ ಎಂದು ಹೇಳಿದ್ದಾರೆ.
ನಾನು ಅವರಿಗೆ ಹೇಳುತ್ತಿದ್ದೇನೆ, ನೆಲ ಜಲ ಭಾಷೆ ವಿಚಾರದಲ್ಲಿ ಎಲ್ಲೂ ಒಟ್ಟಿಗೆ ಇರಬೇಕು.ಚಿತ್ರೋತ್ಸವ ಮಾಡುತ್ತಿರೋದು ಅವರು ಬೆಳೆಯಲಿ ಅಂತ, ಆದ್ರೆ ಅವರೇ ಪ್ರಚಾರ ಮಾಡಬೇಕು, ನಾವು ಮಾಡೋದಕ್ಕೆ ಆಗುತ್ತಾ? ಎಂದು ಹೇಳಿದ್ದಾರೆ.

ಇನ್ನು ನಾಗಭರಣ (Nagabharana) ಅವರಿಗೆ ಆಹ್ವಾನ ಮಾಡಿರದೇ ಇರಬಹುದು.ಪಾಪಾ.. ಯಾರ ಇಲಾಖೆಯದ್ದು ತಪ್ಪಿದೆಯೋ ಗೊತ್ತಿಲ್ಲ.ಅದು ಅವರ ಕಾರ್ಯಕ್ರಮ, ಟೀಕೆ ಮಾಡೋದು ಗೊತ್ತಿತ್ತು, ಟೀಕೆ ಮಾಡಿದ್ದು ಎಚ್ಚರಿಕೆಗೆ ಅಷ್ಟೇ ಬೇರೇನಿಲ್ಲ ಎಂದಿದ್ದಾರೆ.
ನಾವು ತಪ್ಪು ಮಾಡಿದ್ರೆ ನಾವು ಕರೆಕ್ಟ್ ಮಾಡಿಕೊಳ್ಳೋಣ, ಅವರದ್ದು ತಪ್ಪಿದ್ರೆ ಅವರು ಸರಿ ಮಾಡಿಕೊಳ್ಳಲಿ.ಅವರು ಪ್ರಮೋಟ್ ಮಾಡಿಕೊಳ್ಳಬೇಕು ಅಂದ್ರೆ ಸರ್ಕಾರನೂ ಬೇಕು, ಜನವೂ ಬೇಕು ಅಂತ ಡಿಕೆಶಿ ಹೇಳಿದ್ದಾರೆ.











