ಇಂದು ಬಜೆಟ್ ಜಂಟಿ ಅಧಿವೇಶನ (Budget session) ಆರಂಭವಾಗಿದ್ದು ವಿಧಾನಸೌಧಕ್ಕೆ ಆಗಮಿಸಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ (Dcc Dk Shivakumar) ವೀರಪ್ಪ ಮೊಯ್ಲಿ (Veerappa moyli) ಹೇಳಿಕೆಯ ಬಗ್ಗೆ ಮಾತಮಾಡಿದ್ದು, ನಾನು ಅದರ ಬಗ್ಗೆ ಪ್ರತಿಕ್ರಿಯೆ ಕೊಡೊಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ನಾನು ಕಾರ್ಯಕರ್ತರ ಮೀಟಿಂಗ್ ಗೆ ಹೋಗಿದ್ದೆ.ಬೂತ್ ಕಾರ್ಯಕರ್ತರು, ಅಧ್ಯಕ್ಷ ಕೆಲಸಕ್ಕೆ ಹೋಗಿದ್ದೆ.ಅವರ ಹೇಳಿಕೆ ನಾನು ಮಾತನಾಡೊಲ್ಲ.ಅದರ ಬಗ್ಗೆ ಮಾತಾಡೋ ಅವಶ್ಯಕತೆ ಇಲ್ಲ.ವೀರಪ್ಪ ಮೊಯ್ಲಿ ಅವರ ಅಭಿಪ್ರಾಯ ಹೇಳಿದ್ದಾರೆ,ನಾನು ಅದರ ಬಗ್ಗೆ ಮಾತಾಡೊಲ್ಲ ಎಂದಿದ್ದಾರೆ.
ಈಗಾಗಲೇ ನಮ್ಮ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ (Mallikarjuna kharge) ಈ ಬಗ್ಗೆ ಮಾತಾಡಬೇಡಿ ಅಂತ ಸೂಚನೆ ಕೊಟ್ಟಿದ್ದಾರೆ. ಹೀಗಾಗಿ ನಾನು ಅವರ ಸೂಚನೆಯನ್ನು ಪಾಲನೆ ಮಾಡ್ತೀನಿ ಎಂದು ಹೇಳಿದ ಡಿಕೆ ಅಲ್ಲಿಂದ ತೆರಳಿದ್ದಾರೆ.