ಪ್ರತಿವರ್ಷ ಮಹಾಶಿವರಾತ್ರಿ (Maha Shivaratri) ಸಂಭ್ರಮದ ವೇಳೆ ಮಲೆ ಮಹದೇಶ್ವರ ಬೆಟ್ಟದಲ್ಲಿ (MM Hills)ಲಕ್ಷಾಂತರ ಭಕ್ತರು ಆಗಮಿಸಿ ಮಾದಪ್ಪನ ದರ್ಶನ ಪಡೆದು ಪುನೀತರಾಗುತ್ತಾರೆ. ಹೀಗಾಗಿ ಜನ ಜಾತ್ರೆಯೇ ನಿರ್ಮಾಣವಾಗಿರುತ್ತದೆ.

ಈ ಜನಜಾತ್ರೆಯ ಮಧ್ಯೆಯೂ ಸ್ಯಾಂಡಲ್ವುಡ್ ಸಲಗ ದುನಿಯಾ ವಿಜಯ್ ಮಾದಪ್ಪನ ಬೆಟ್ಟಕ್ಕೆ ಭೇಟಿ ಕೊಟ್ಟಿದ್ದಾರೆ.ಸಿಟಿ ಲೈಟ್ಸ್ ಸಿನಿಮಾದ ಚಿತ್ರೀಕರಣಕ್ಕಾಗಿ ಬೆಟ್ಟಕ್ಕೆ ಭೇಟಿ ಕೊಟ್ಟಿದ್ದ ಚಿತ್ರತಂಡ ಶೂಟಿಂಗ್ನಲ್ಲಿ ಬ್ಯುಸಿಯಾಗಿತ್ತು.

ನಟ ವಿನಯ್ ರಾಜ್ಕುಮಾರ್, ವಿಜಯ್ ಪುತ್ರಿ ಮೋನಿಷಾ ಭಾಗಿಯಾಗಿದ್ರು.ಬೆಟ್ಟದಲ್ಲಿ ಲಕ್ಷಾಂತರ ಅಭಿಮಾನಿಗಳು ಜಮಾಯಿಸಿರೋ ದೃಶ್ಯಗಳ ಚಿತ್ರೀಕರಣ ನಡೆಸಲಾಗಿದ್ದು, ದುನಿಯಾ ವಿಜಯ್ ನೋಡಿ ಅಭಿಮಾನಿಗಳು ಖುಷಿ ಹಂಚಿಕೊಂಡಿದ್ದಾರೆ.