ಮಹಾ ಕುಂಭಮೇಳದ (Maha kumbh) ಹಿನ್ನಲೆ ಕಳೆದ ವಾರ ಡಿಸಿಎಂ ಡಿಕೆ ಶಿವಕುಮಾರ್ (Dk Shivakumar) ಪ್ರಯಾಗರಾಜ್ ಗೆ ಭೇಟಿ ನೀಡಿ ಪುಣ್ಯಸ್ನಾನದಲ್ಲಿ (Holy dip) ಭಾಗಿಯಾಗಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ನಡುವೆ ಡಿಕೆಶಿ ಕೊಯಮತ್ತೂರಿನ ಈಶಾ ಫೌಂಡೇಶನ್ (Isha foundation) ನ ಶಿವರಾತ್ರಿ ಜಾಗರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ .

ಈ ಬೆಳವಣಿಗೆಯಿಂದ ಕಾಂಗ್ರೆಸ್ ಪಕ್ಷದ ಹಲವು ನಾಯಕರು ಅಸಮಾಧಾನಗೊಂಡಿದ್ದಾರೆ. ಸದ್ಯ ಕಾಂಗ್ರೆಸ್ ಆಂತರಿಕ ಪರಿಸ್ಥಿತಿ ನೋಡಿದ್ರೆ, ಈ ಕಿಡಿ ಮತ್ತಷ್ಟು ಧಗಧಗಿಸುವಂತೆ ಭಾಸವಾಗುತ್ತಿದೆ.

ಇನ್ನು ಈ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಭಾಗಿಯಾಗಿದ್ದರು. ಈ ವೇಳೆ ಡಿಕೆ ಶಿವಕುಮಾರ್, ಅಮಿತ್ ಶಾ ಒಟ್ಟಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬೆಳವಣಿಗೆ ಕುತೂಹಲಕ್ಕೆ ಕಾರಣವಾಗಿದೆ.
ಯಾಕಂದ್ರೆ ಈ ಬಗ್ಗೆ ಮೊನ್ನೆಯಷ್ಟೇ ಮಾತಾಡಿದ್ದ ಡಿಸಿಎಂ ಡಿಕೆ, ನಾನಿನ್ನೂ ಅಮಿತ್ ಶಾರನ್ನ ಭೇಟಿಯಾಗಿಲ್ಲ. ಆಗಲೇ ಬಿಜೆಪಿಗೇ ಸೇರುತ್ತೇನೆಂಬ ಚರ್ಚೆಯಾಗ್ತಿದೆ ಅಂತ ಹೇಳಿದ್ರು. ಈಗ ಖುದ್ದು ಅಮಿತ್ ಶಾ ಜೊತೆ ಕಾಣಿಸಿಕೊಂಡಿದ್ದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ.

ಆದ್ರೆ ಉಭಯ ನಾಯಕರು ಒಂದೇ ವೇದಿಕೆಯಲ್ಲಿ ಅಕ್ಕ- ಪಕ್ಕ ಕುಳಿತಿದ್ರೂ ಪರಸ್ಪರ ಯಾವುದೇ ಮಾತುಕತೆ ನಡೆಸಿಲ್ಲ.