ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಕರ್ನಾಟಕ ಇಂಟರ್ ನ್ಯಾಷನಲ್ ಟ್ರಾವೆಲ್ ಎಕ್ಸ್ ಪೋ ಕಾರ್ಯಕ್ರಮ ನಡೆಯುತ್ತಿದೆ. ಕಾರ್ಯಕ್ರಮಕ್ಕೆ ವ್ಹೀಲ್ ಚೇರ್ನಲೇ ಆಗಮಿಸಿದ್ದಾರೆ ಸಿಎಂ ಸಿದ್ದರಾಮಯ್ಯ. ಕರ್ನಾಟಕ ಪ್ರವಾಸೋದ್ಯಮ ಇಲಾಖೆ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಿದ್ದಾರೆ. ಪ್ರವಾಸೋದ್ಯಮ ಇಲಾಖೆ ಸಚಿವ ಹೆಚ್.ಕೆ ಪಾಟೀಲ್, ಶಾಸಕ ರಿಜ್ವಾನ್ ಅರ್ಷದ್, ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್, ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ, ಎಂಎಲ್ಸಿ ಗೋವಿಂದ್ ರಾಜ್, ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಎನ್.ಎಸ್ ಬೋಸರಾಜ್ ಭಾಗಿಯಾಗಿದ್ದಾರೆ.

ನಾಡ ಗೀತೆ ವೇಳೆ ಎದ್ದು ನಿಲ್ಲಲಾಗದೆ ಸಿಎಂ ಸಿದ್ದರಾಮಯ್ಯ, ವ್ಹೀಲ್ ಚೇರ್ನಲ್ಲೇ ಕೂತಿದ್ದರು. ಎಡಗಾಲಿನ ಮಂಡಿ ನೋವಿನಿಂದ ಎದ್ದು ನಿಲ್ಲೋಕೆ ಸಾಧ್ಯವಾಗದೇ ವ್ಹೀಲ್ ಚೇರ್ನಲ್ಲೇ ಕೂತಿದ್ದರು ಸಿಎಂ ಸಿದ್ದರಾಮಯ್ಯ. ಆ ಬಳಿಕ ಆಪ್ತರ ಸಹಾಯದೊಂದಿಗೆ ಎದ್ದು ನಿಂತ ಸಿಎಂ ಸಿದ್ದರಾಮಯ್ಯ ಭಾಷಣ ಮಾಡಿದ್ದಾರೆ. ಕರ್ನಾಟಕ ವಿಭಿನ್ನ ಸಾಂಸ್ಕೃತಿಕ, ಪಾರಂಪರಿಕ ತಾಣಗಳಿರೋ ಜಾಗ, ವಿಶ್ವದಲ್ಲೇ ಕರ್ನಾಟಕ ಪ್ರವಾಸೋದ್ಯಮಕ್ಕೆ ಹೇಳಿದ ಜಾಗ. ಟೂರ್ ಆಪರೇಟರ್, ಏಜೆಂಟ್, ಎಲ್ಲರ ಸಮಾಗಮ ಆಗಿದೆ. ಯುನೆಸ್ಕೋ ಪಟ್ಟಿ ಸೇರಿದ ಅನೇಕ ತಾಣಗಳು ಇಲ್ಲಿವೆ ಎಂದಿದ್ದಾರೆ.

35 ನ್ಯಾಷನಲ್ ಪಾರ್ಕ್, ಬೆಟ್ಟಗಳು, ಅಡ್ವೆಂಚರ್ ಹಾಟ್ ಸ್ಪಾಟ್, ವಿವಿಧ ದೇವಸ್ಥಾನ, ಬಸದಿ, ಸಾಂಸ್ಕೃತಿಕ ಪರಂಪರೆ ಇರೋ ಜಾಗ. ಕರ್ನಾಟಕ ಕೇವಲ ಎಮೋಷನಲ್ ಪ್ರದೇಶ ಮಾತ್ರವಲ್ಲ, ಒಂದು ಸುಂದರ ತಾಣ. ಉತ್ತಮ ವಿಮಾನ ನಿಲ್ದಾಣಗಳಿವೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಉತ್ತಮ ರಸ್ತೆಗಳು ನಿಮ್ಮ ಪ್ರವಾಸವನ್ನ ಹಿತಗೊಳಿಸಲಿದೆ. ಪ್ರವಾಸೋದ್ಯಮಕ್ಕೆ ಹೂಡಿಕೆ ಮಾಡಲು ಸೂಕ್ತ ಜಾಗ ಎಂದಿದ್ದಾರೆ ಸಿಎಂ. ಸ್ಕಿಲ್ ಡೆವಲಪ್ಮೆಂಟ್ ಮೂಲಕ ಸ್ಥಳೀಯವಾಗಿ ಅನುಭವವಿರೋ ಯುವಕರಿದ್ದಾರೆ. ಇದರಿಂದ ಉದ್ಯೋಗ ಸೃಷ್ಟಿಯಾಗಲಿದೆ. ಕರ್ನಾಟಕ ಟೂರಿಸಂ ಪಾಲಿಸಿ ಮೂಲಕ ಬ್ಯುಸಿನೆಸ್ ಕೂಡ ಆರಂಭಿಸಲು ಅವಕಾಶ ನೀಡಲಾಗಿದೆ ಎಂದಿದ್ದಾರೆ.

ಹೊಸ ಟೂರಿಸಂ ಪ್ರಾಡಕ್ಟ್‌ಗೂ ಕೂಡ ಕರ್ನಾಟಕದಲ್ಲಿ ಅವಕಾಶ ಇದೆ. ಹೊಸ ಪಾಲಿಸಿ ಇಂದ ಒಂದೂವರೆ ಲಕ್ಷ ಉದ್ಯೋಗ ಸೃಷ್ಟಿ ಆಗಿದೆ. ನಮ್ಮ ಸರ್ಕಾರ ಟೂರಿಸಂ ಹೂಡಿಕೆಗೆ ಮುಂದಾಗುವವರಿಗೆ ಸಹಕಾರ ನೀಡಲಿದೆ. ನೂರಾರು ಪ್ರವಾಸೋದ್ಯಮ ಕೇಂದ್ರಗಳಿದ್ದು, ಸುತ್ತಾಡಲು ಅನುಕೂಲ ಆಗಲಿದೆ. B2B ಬ್ಯುಸಿನೆಸ್ ಮೂಲಕ ನೇರವಾಗಿ ಮಾರಾಟ ಮತ್ತು ಕೊಳ್ಳುವವರಿಗೆ ಅನುಕೂಲ ಮಾಡಿಕೊಡಲಾಗಿದೆ. ನಮ್ಮ ಸಾಂಸ್ಕೃತಿಕ ಪರಂಪರೆ ಪ್ರವಾಸೋಧ್ಯಮದ ಶ್ರೀಮಂತಿಕೆಯನ್ನ ಹೆಚ್ಚಿಸಿದೆ. ಪ್ರತೀ ಪ್ರವಾಸಿಗನಿಗೂ ಅಗತ್ಯವಿರೋ ಮಾಹಿತಿಯನ್ನ ಒದಗಿಸಲಿದೆ. ಪ್ರವಾಸೋದ್ಯಮ ಆರಂಭಿಸಲು ಆಗಮಿಸುವವರಿಗೆ ಕರ್ನಾಟಕ ಸರ್ಕಾರ ಎಲ್ಲಾ ಇನ್ಸೆನ್ಟೀವ್, ಮೆಕಾನಿಸಂ ಒದಗಿಸಲಿದೆ ಎಂದು ಭರವಸೆ ನೀಡಿದ್ದಾರೆ.