ಸಿಎಂ ಪತ್ನಿಗೆ 14 ಸೈಟ್ ಕೊಟ್ಟ ಅಂದಿನ ಡಿಸಿ ತಪ್ಪು ಮಾಡಿದ್ದಾರಾ..? ಈಗ ಏನಂತಾರೆ..?
ಮುಡಾ ಪ್ರಕರಣದಲ್ಲಿ ಕರ್ತವ್ಯ ಲೋಪ ಆರೋಪ ಕೇಳಿ ಬಂದ ಬಳಿಕ ರಾಯಚೂರಿನಲ್ಲಿ ಮಾಜಿ ಡಿಸಿ ಹಾಗೂ ಹಾಲಿ ಕಾಂಗ್ರೆಸ್ ಸಂಸದ ಜಿ.ಕುಮಾರ್ ನಾಯಕ್ ಪ್ರತಿಕ್ರಿಯೆ ನೀಡಿದ್ದಾರೆ. ಲೋಕಾಯುಕ್ತರು ಯಾವ ದೃಷ್ಟಿಯಲ್ಲಿ ಕರ್ತವ್ಯ ಲೋಪ ಎಂದು ಹೇಳುತ್ತಿದ್ದಾರೋ, ಸರಿಯಾಗಿ ಪರಿಶೀಲನೆ ಮಾಡಿಲ್ಲವೆಂದು ಹೇಳುತ್ತಿದ್ದಾರೆ.. ಅದು ಅವರ ದೃಷ್ಟಿಯಲ್ಲಿ ಬಂದಿರುವಂತದ್ದು.. ನಾನು ಅದನ್ನ ಡಿಫೈನ್ ಮಾಡಿಕೊಳ್ಳಲು ಸಮಯಾವಕಾಶ ಇದ್ದಾಗ ಮಾಡಿಕೊಳ್ಳೋಣ ಎಂದಿದ್ದಾರೆ.

ಈ ಸಂದರ್ಭದಲ್ಲಿ ಅದರ ಬಗ್ಗೆ ಟೀಕೆ- ಟಿಪ್ಪಣಿ ಮಾಡುವುದು ಸರಿ ಕಾಣಿಸುತ್ತಿಲ್ಲ. ಆ ಸಂದರ್ಭದಲ್ಲಿ ಕೆಳ ಹಂತದ ಅಧಿಕಾರಿಗಳು ಏನು ಮಾಹಿತಿ ಕೊಟ್ಟಿರುತ್ತಾರೆ ಅದರ ಆಧಾರದ ಮೇಲೆ ನಿರ್ಧಾರ ಮಾಡಿರುತ್ತೇವೆ. ಇನ್ನೂ ಮುಖ್ಯವಾಗಿ ಹೇಳಬೇಕು ಅಂದ್ರೆ, ಅದು ಆಗಿ ಎರಡು ದಿನಗಳಲ್ಲಿ ನನಗೆ ವರ್ಗಾವಣೆ ಆಯ್ತು. ಮೈಸೂರಿನಿಂದ ಹೊರ ಬಂದು ಬೇರೆ ಕಡೆ ಬಂದಿದ್ದೇನೆ.. ಆಗಿನ ವಿಚಾರ ನನಗೆ ನೆನಪು ಇಲ್ಲ. ಅದು ಏನಾದರೂ ದೊಡ್ದ ಪ್ರಕರಣ ಆಗಿದ್ರೆ, ಅಚ್ಚಳಿಯದೆ.. ಮನಸಲ್ಲಿ ಉಳಿದುಕೊಂಡು ಇರುತ್ತೆ.. ನಿನ್ನೆ ಏನು ತಿಂಡಿ ತಿಂದೆ ಎನ್ನುವುದು ನೆನಪು ಇರುವುದಿಲ್ಲ ಎಂದಿದ್ದಾರೆ.

50 ವರ್ಷದ ಹಿಂದೆ ಕ್ಲಾಸ್ನಲ್ಲಿ ಏನು ಅಂದಿದ್ರು ಅನ್ನೋದು ಗೊತ್ತಿರುತ್ತೆ.. ನನಗೆ ಈ ಪ್ರಕರಣ ಅಂತೂ ಒಂದು ಚೂರು ನೆನಪಿಲ್ಲ ಎಂದಿದ್ದಾರೆ ಕಾಂಗ್ರೆಸ್ ಸಂಸದ ಜಿ.ಕುಮಾರ್ ನಾಯಕ್. ಸಿಎಂ ಸಿದ್ದರಾಮಯ್ಯ ಪತ್ನಿಗೆ ನಿವೇಶನ ಹಂಚಿಕೆ ಮಾಡಿದ ಪ್ರಕರಣದಲ್ಲಿ ನಾನು ಲೋಕಾಯುಕ್ತ ವರದಿ ನೋಡಿಲ್ಲ. ಪತ್ರಿಕಾ ವರದಿಯನ್ನು ಮಾತ್ರ ಇಂದು ಗಮನಿಸಿದ್ದೇನೆ. ಲೋಕಾಯುಕ್ತ ವರದಿ ಸಿಕ್ಕ ಬಳಿಕ ಅದನ್ನ ಗ್ರಹಿಸಿ ಪ್ರತಿಕ್ರಿಯೆ ನೀಡುತ್ತೇನೆ. ನಕ್ಷೆಯನ್ನ ತಯಾರಿಸಿ ಅನ್ಯಕ್ರಾಂತಿಗೆ ಬರುವಷ್ಟರಲ್ಲಿ ಡಿನೋಟಿಫಿಕೇಷನ್ ಆಗಿದ್ದು ಖಚಿತವಾಗಿತ್ತು ಎಂದಿದ್ದಾರೆ.

ಇವತ್ತಿನವರೆಗೂ ಸರ್ಕಾರ ಡಿನೋಟಿಫಿಕೇಷನ್ ಕ್ಯಾನ್ಸಲ್ ಮಾಡಿಲ್ಲ. ಒಂದೇ ಏಟಿಗೆ ಡಿನೋಟಿಫಿಕೇಷನ್ ಕ್ಯಾನ್ಸಲ್ ಮಾಡಬಹುದು. ಅನ್ಯಕ್ರಾಂತ (Alienation) ಮಾಡುವ ಸಂದರ್ಭದಲ್ಲಿ, ಓನರ್ ಶಿಪ್ ಅವರಿಗೆ ಸಂಬಂಧಪಟ್ಟಿದ್ದಲ್ಲ ಎಂಬುವುದು ಖಚಿತ ಪಡಿಸಿಕೊಳ್ಳುತ್ತೇವೆ.. ಸರ್ಕಾರದ ಭೂಮಿನಾ ಅಥವಾ ಇನ್ನೊದ್ದೋ ಬಡವರಿಗೆ ಸೇರಿದಾಗ, ಭೂಮಿ ಬಂದ ಕ್ರಮ, ಸೇಲ್ ಈ ಕ್ರಮಗಳನ್ನ ನಾವು ನೋಡುತ್ತಿದ್ದೆವು. ಅದು ಬಿಟ್ಟು ಬೇರೆ ಅಂಶಗಳು ನನಗೆ ಅಗಣ್ಯ ಅನ್ನಿಸುತ್ತೆ.. ಮುಡಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅನ್ಯಕಾಂತ್ರ (Alienation) ಮಾಡುವುದರಿಂದ, ಯಾವುದೋ ಒಂದು ಪ್ರಭಾವ ಆಗಿದೆ ಎಂದು ನನಗೆ ಅನ್ನಿಸುತ್ತಿಲ್ಲ ಎಂದಿದ್ದಾರೆ.
ಆದ್ರೂ ಲೋಕಾಯುಕ್ತರು ವರದಿಯಲ್ಲಿ ಏನು ಹೇಳಿದ್ದಾರೆ ಎಂಬುವುದು ನೋಡುತ್ತೇನೆ. ಏಕೆ ಅಂದರೆ ಅನ್ಯಕಾಂತ್ರ ಮಾಡಿದ ಭೂಮಿಯ ಬಗ್ಗೆ ನಾವು ಇವತ್ತು ಮಾತನಾಡುವುದು ಆಯ್ತು.. ಮುಡಾದಲ್ಲಿನ ಸ್ಕಿಂ ಪ್ರಕಾರ ಭೂಮಿಗೆ ಭೂಮಿ ಪರಿಹಾರ ಎಂಬುವುದು ಇದೆ. ಅದು ಅನ್ಯಕಾಂತ್ರ (Alienation) ಭೂಮಿಯೇ, ಅನ್ಯಕಾಂತ್ರ ಆಗಿರದೇ ಇರುವ ಭೂಮಿಯೇ, ನೀರಾವರಿ ಭೂಮಿಯೇ, ತೋಟದ ಭೂಮಿಯೇ, ಆ ಸ್ಕಿಂನಲ್ಲಿ ಆ ತರಹ ಯಾವುದಕ್ಕೂ ಅವಕಾಶ ಇಲ್ಲ.. ಅವರು ಭೂಮಿ ಕಳೆದುಕೊಂಡಿದ್ದು ಸತ್ಯ. ಅದಕ್ಕೆ ಮುಡಾದವರು ಭೂಮಿ ಕೊಡುತ್ತಿದ್ದಾರೆ ಎಂದಿದ್ದಾರೆ..
ಲೋಕಾಯುಕ್ತರು ಅಂತಿಮ ವರದಿ ಇನ್ನೂ ಕೊಟ್ಟಿಲ್ಲ, ಪೊಲೀಸ್ ಅಧಿಕಾರಿಗಳು ತಮ್ಮ ವರದಿಯನ್ನ ನ್ಯಾಯಾಧೀಶರಿಗೆ ಕೊಡಬೇಕಾಗುತ್ತೆ. ವರದಿ ಕೊಡುವ ಸಂದರ್ಭದಲ್ಲಿ ಆಗ ನಮಗೆ ವರದಿ ಸಿಗುತ್ತದೆ. ವರದಿ ಸಿಕ್ಕ ಬಳಿಕ ನೋಡೋಣ. ನೋಟಿಫಿಕೇಸ್ ಆಯ್ತು, ಆ ಬಳಿಕ ಡಿನೋಟಿಫಿಕೇಷನ್ ಆಯ್ತು.. ಜಿಲ್ಲಾಧಿಕಾರಿಗಳು ಮಾಡಿದ್ದಾರ ಅಲ್ಲ.. ಸರ್ಕಾರದ ಮಟ್ಟದಲ್ಲಿ ಡಿನೋಟಿಫಿಕೇಷನ್ ಆಗಿರುವಂತದ್ದು.. ಡಿನೋಟಿಫಿಕೇಷನ್ ಆದ ಬಳಿಕ ಆ ಭೂಮಿ ಎಲ್ಲಿ ಹೋಗುತ್ತದೆ. ಆ ಭೂಮಿಯ ಮೂಲ ಮಾಲೀಕನ ಬಳಿ ಹೋಗುತ್ತದೆ ಎಂದಿದ್ದಾರೆ.