
ತುಮಕೂರು: ನೀವೆಲ್ಲಾ ದೊಡ್ಡ ಮನಸ್ಸು ಮಾಡಿ ನನ್ನ ರಾಜಿನಾಮೆ ಕೇಳಿದ್ರೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲು ಸಿದ್ದ ಎಂದು ಗೃಹ ಸಚಿವ ಡಾ ಜಿ. ಪರಮೇಶ್ವರ್ ಹೇಳಿದ್ದಾರೆ. ಪರಮೇಶ್ವರ್ ಬಾಯಲ್ಲಿ ರಾಜಿನಾಮೆ ಮಾತು ಕೇಳಿ ಕಾರ್ಯಕರ್ತರು ತಬ್ಬಿಬ್ಬಾಗಿದ್ದಾರೆ..
ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬದಲಾವಣೆ ಚರ್ಚೆ ನಡುವೆ ಗೃಹ ಸಚಿವರು ರಾಜೀನಾಮೆ ಮಾತನಾಡಿರುವುದು ಮಹತ್ವ ಪಡೆದುಕೊಂಡಿದೆ. ಗೃಹ ಸಚಿವ ಡಾ.ಜಿ ಪರಮೇಶ್ವರ್ ಬಾಯಲ್ಲಿ ರಾಜೀನಾಮೆ ಮಾತು ಕೇಳಿ ಕಾಂಗ್ರೆಸ್ ಕಾರ್ಯಕರ್ತರೇ ಗೊಂದಲಕ್ಕೆ ಈಡಾಗಿದ್ದಾರೆ.
ತುಮಕೂರಿನ ಕೊರಟಗೆರೆಯ ರಾಜೀವ್ ಭವನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಚಿವ ಡಾ ಜಿ ಪರಮೇಶ್ವರ್, ಕಾರ್ಯಕರ್ತರ ಮನದಾಳಕ್ಕೆ ಸ್ಪಂದಿಸಲು ಆಗದಕ್ಕೆ ಬೇಸರ ಹೊರ ಹಾಕಿರುವ ಗೃಹ ಸಚಿವ ಪರಮೇಶ್ವರ್, ಇತ್ತೀಚೆಗೆ ಕ್ಷೇತ್ರದ ಕಾರ್ಯಕರ್ತರೊಂದಿಗೆ ಬೆರೆಯಲು ಆಗುತ್ತಿಲ್ಲ ಎಂದು ಬೇಸರ ಹೊರ ಹಾಕಿದ್ದರು.
ನಿಮ್ಮ ಮನಸಿನ ಆಕಾಂಕ್ಷೆಯಂತೆ ನಾನು ಸ್ಪಂದಿಸಲು ಸಾಧ್ಯವಾಗದಕ್ಕೆ ಕಾರ್ಯಕರ್ತರ ಕ್ಷಮೆ ಕೇಳಿದ ಪರಮೇಶ್ವರ್, ನೀವು ಹೇಳಿದರೆ ಗೃಹ ಸಚಿವ ಸ್ಥಾನ ರಾಜೀನಾಮೆ ನೀಡಲು ಸಿದ್ದ ಅಂತಾ ಹೇಳಿದ್ದಾರೆ. ಪರಮೇಶ್ವರ್ ಹೇಳಿಕೆಯಿಂದ ಕಾರ್ಯಕರ್ತರು ಹಾಗೂ ಮುಖಂಡರು ವಿಚಲಿತರಾಗಿದ್ದಾರೆ.
