ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ (ICC Champions trophy) ಭಾರತ ಮತ್ತು ಪಾಕಿಸ್ತಾನದ (India v/s Pakistan) ನಡುವಿನ ಮೊದಲ ಪಂದ್ಯಕ್ಕೆ ಕೌಂಟ್ ಡೌನ್ ಶುರುವಾಗಿದ್ದು, ಸಾಂಪ್ರದಾಯಿಕ ಎದುರಾಳಿಗಳ ಕಾದಾಟ ನೋಡಲು ಇಡೀ ವಿಶ್ವವೇ ಕಾತುರದಿಂದ ಕಾದು ಕುಳಿತಿದೆ. ಈ ಮಧ್ಯೆ ಭಾರತ ಗೆಲ್ಲುವುದಿಲ್ಲ ಎಂಬ ಭವಿಷ್ಯ ಒಂದು ಭಾರೀ ಸದ್ದು ಮಾಡುತ್ತಿದೆ.

ಹೌದು ಈ ಬಾರಿಯ ಮಹಾ ಕುಂಭಮೇಳದಲ್ಲಿ ಪ್ರವರ್ಧಮಾನಕ್ಕೆ ಬಂದು ಜನಪ್ರಿಯರಾದ ಐಐಟಿ ಬಾಬಾ (IIT Baba) ಎಂದೇ ಖ್ಯಾತಿ ಪಡೆದ ಅಭಯ ಸಿಂಗ್ ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ವೇಳೆ ವಿಶ್ವ ಚಾಂಪಿಯನ್ ಟ್ರೋಫಿಯಲ್ಲಿ ಭಾರತ-ಪಾಕಿಸ್ತಾನ ತಂಡದ ಪಂದ್ಯದ ಫಲಿತಾಂಶ ಏನಾಗಲಿದೆ ಎಂದು ಪ್ರಶ್ನೆಗೆ ಉತ್ತರಿಸಿದ್ದಾರೆ.
ಈ ಬಾರಿಯ ಪಂದ್ಯದಲ್ಲಿ ಪಾಕಿಸ್ತಾನ ಗೆಲ್ಲಲಿದೆ ಎಂದು ಐಐಟಿ ಬಾಬಾ ಹೇಳಿದ್ದಾರೆ. ಐಐಟಿ ಬಾಬ ಭವಿಷ್ಯ ನುಡಿದಿರುವ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಐಐಟಿ ಬಾಬಾ ಭವಿಷ್ಯ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.