ಬಸನಗೌಡ ಪಾಟೀಲ್ ಯತ್ನಾಳ್ (Basanagowda patil yatnal) ವಿರುದ್ಧ ದಾವಣಗೆರೆಯಲ್ಲಿ ರೇಣುಕಾಚಾರ್ಯ (Renukacharya) ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಯತ್ನಾಳ್ ದು ಕೇವಲ ಲೂಸ್ ಟಾಕೀಂಗ್.ಅವರಿಗೆ ಬೈಯ್ಯೋದೆ ಕೆಲಸ ಆಗಿದೆ.ಅವರಿಗೆ ಭಾರತೀಯ ಜನತಾ ಪಾರ್ಟಿ (BJP) ಮೇಲೆ ಅಭಿಮಾನ ಇದ್ದಿದ್ದರೆ ಈ ರೀತಿ ಹಾದಿ ಬೀದಿಯಲ್ಲಿ ಮಾತನಾಡಬಾರದು ಎಂದಿದ್ದಾರೆ.

ಶಿಸ್ತು ಸಮಿತಿಯ ಅಧ್ಯಕ್ಷರು ನೋಟಿಸ್ ನೀಡಿದಾಗ ಫೇಕ್ ನೋಟಿಸ್ ಅಂದ್ರು. ವಿಜಯೇಂದ್ರ ಬಗ್ಗೆ ಮಾತನಾಡೋಕೆ ನಿಂಗೆ ಏನು ನೈತಿಕಥೆ ಇದೆ..?ಬಬಲೇಶ್ವರದಲ್ಲಿ ನಿನ್ನ ಕ್ಷೇತ್ರ ಅಲ್ಲಿಂದ ಸ್ಪರ್ಧೆ ಮಾಡು.ಅದನ್ನ ಬಿಟ್ಟು ಪ್ರಭಾವಿ ಸಚಿವರ ವಿರುದ್ಧ ಹೊಂದಾಣಿಕೆ ಮಾಡಿಕೊಂಡಿದ್ದೀಯಾ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಈ ತಿಂಗಳು 12 ತಾರೀಖು ಸಭೆ ನಿಯೋಜನೆ ಮಾಡಿದ್ವಿ. ಆದರೆ ಅಧ್ಯಕ್ಷರು ಬೇಡ ಅಂದ್ರು ಅದಕ್ಕೆ ಸುಮ್ಮನೆ ಆದ್ವಿ.ನಾವು ಪಕ್ಷಕ್ಕೆ ಅಧ್ಯಕ್ಷರಿಗೆ ಗೌರವ ನೀಡ್ತೀವಿ..ಕುಮಾರ್ ಬಂಗಾರಪ್ಪ ನೀನು ಕಾಂಗ್ರೆಸ್ ನಲ್ಲಿ ಅನಾಥ ಶಿಶು ಆಗಿದ್ದೆ. ನಿನಗೆ ರಾಜಕೀಯ ಪುನರ್ಜನ್ಮ ಕೊಟ್ಟಿದ್ದು ಯಡಿಯೂರಪ್ಪ ಅವರು ಎಂದು ಜಾಡಿಸಿದ್ದಾರೆ.