ಬಿಜೆಪಿಯ ರೆಬಲ್ಸ್ (Bjp rebels) ಟೀಮ್ ನಾಯಕರು ರಾಜ್ಯಾಧ್ಯಕ್ಷರ ಸ್ಥಾನದ ಚುನಾವಣೆಯಿಂದ ಹಿಂದೆ ಸರಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ಇಂದು ಕುಮಾರ್ ಬಂಗಾರಪ್ಪ (Kumar bangarappa) ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ನಾವು ಕೇಂದ್ರದ ವರಿಷ್ಠರಿಗೆ ಮಾಹಿತಿ ನೀಡಿದ್ದೇವೆ.ರಾಜ್ಯಾಧ್ಯಕ್ಷರ ಚುನಾವಣೆಗೆ ಇನ್ನು ಸಮಯವಿದ್ದು, ರಾಜ್ಯಕ್ಕೆ ಶಿವರಾಜ್ ಸಿಂಗ್ ಚೌಹಾನ್ (Shivaraj singh Chauhan) ಬರುವ ದಿನವೇ ಘೋಷಣೆ ಆಗಿಲ್ಲ ಎಂದಿದ್ದಾರೆ.

ಮೊದಲಿಗೆ ರಾಜ್ಯಕ್ಕೆ ಶಿವರಾಜ್ ಸಿಂಗ್ ಚೌಹಾನ್ ಬರುವ ದಿನ ಗೊತ್ತಾಗಬೇಕು, ಚುನಾವಣೆ ದಿನಾಂಕ ಘೋಷಣೆ ಮಾಡಬೇಕು.ಇವೆಲ್ಲವೂ ಆದ ಮೇಲೆ ನಾವು ತೀರ್ಮಾನ ಮಾಡುತ್ತೇವೆ ಎಂದ ಅವರು, ಸಂದರ್ಭ ಬಂದರೆ ಸಮಿತಿ ಜೊತೆಗೆ ಕುಳಿತು ಚರ್ಚೆ ಮಾಡಿ ನಾಮಪತ್ರ ಸಲ್ಲಿಕೆ ಮಾಡುತ್ತೇವೆ ಎಂದಿದ್ದಾರೆ.

ಈ ವಿಚಾರದಲ್ಲಿ ಮೊದಲು ತೆಗೆದುಕೊಂಡ ತೀರ್ಮಾನಕ್ಕೆ ನಾವು ಈಗಲೂ ಬದ್ಧವಾಗಿದ್ದೇವೆ.ನೋಟಿಸ್ ಕೊಟ್ಟಿರುವುದಕ್ಕೆ ಯತ್ನಾಳ್ ಉತ್ತರ ಕೊಡ್ತಾರೆ.ಉತ್ತರ ಕರ್ನಾಟಕದ ಭಾಷೆಯಲ್ಲಿ ಮಾತಾಡುವಾಗ ಸ್ವಲ್ಪ ಏರಿಳಿತ ಆಗುತ್ತದೆ.ಅದರ ಬಗ್ಗೆ ಯತ್ನಾಳ್ ಉತ್ತರ ಕೊಡ್ತಾರೆ ಎಂದು ಕುಮಾರ್ ಬಂಗಾರಪ್ಪ ಹೇಳಿದ್ದಾರೆ.