ಗರ್ಭವಸ್ಥೆಯಲ್ಲಿ ಹೆಣ್ಣು ಮಕ್ಕಳು ತಮ್ಮ ಆರೋಗ್ಯ ಮಾತ್ರವಲ್ಲದೆ ಮಗುವಿನ ಆರೋಗ್ಯದ ಬಗ್ಗೆ ಕೂಡ ಕಾಳಜಿಯನ್ನು ವಹಿಸುವುದು ಉತ್ತಮ. ಅದರಲ್ಲೂ ಸರಿಯಾದ ರೀತಿಯಲ್ಲಿ ಪೋಷಕಾಂಶಗಳು ಸಿಕ್ಕರೆ ಮಗುವಿನ ಬೆಳವಣಿಗೆಗೆ ಸಹಾಯಕಾರಿಯಾಗುತ್ತದೆ. ಸರಿಯಾದ ಸಮಯಕ್ಕೆ ಊಟ ತಿಂಡಿ ಮಾಡುವುದರ ಜೊತೆಗೆ ಹಣ್ಣು ಹಂಪಲುಗಳನ್ನು ಹೆಚ್ಚಿನ ಮಟ್ಟದಲ್ಲಿ ಸೇವಿಸಬೇಕು.

ಇನ್ನು ಇದ್ದೆಲ್ಲದರ ಜೊತೆಗೆ ಈ ಸಮಯದಲ್ಲಿ ಅತಿಯಾಗಿ ಕಾರವಿರುವಂತಹ ಪದಾರ್ಥಗಳು ಹಾಗೂ ಮಸಾಲೆಯುಕ್ತ ಆಹಾರ ಸೇವಿಸುವುದು ಒಳ್ಳೆಯದ್ದಲ್ಲ ಇದರಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳು ಬೀರುತ್ತದೆ.
ಎದೆಯುರಿ
ಮಸಾಲೆಯುಕ್ತ ಆಹಾರಗಳನ್ನು ಗರ್ಭಿಣಿಯರು ತಿನ್ನುವುದರಿಂದ ಎದೆಯುರಿ, ಆಸಿಡ್ ರಿಫಲ್ಕ್ಸ್ ಮತ್ತು ಅಸ್ವಸ್ಥತೆಯನ್ನು ಉಂಟಾಗುತ್ತದೆ , ಇದು ಗರ್ಭಾವಸ್ಥೆಯಲ್ಲಿ ಹೆಚ್ಚು .

ಅಜೀರ್ಣ ಮತ್ತು ಹೊಟ್ಟೆ ಉಬ್ಬರ
ಮಸಾಲೆಯುಕ್ತ ಆಹಾರಗಳು ಅಜೀರ್ಣ ಸಮಸ್ಯೆಗೆ ಕಾರಣವಾಗುತ್ತದೆ , ಹೊಟ್ಟೆ ಉಬ್ಬರ ಮತ್ತು ಗ್ಯಾಸ್ ಗೂ ಕೂಡ ಕಾರಣವಾಗಬಹುದು, ಇದು ಗರ್ಭಿಣಿಯರಿಗೆ ಅನಾನುಕೂಲವನ್ನುಂಟು ಮಾಡುತ್ತದೆ.
ಅತಿಸಾರ ಮತ್ತು ನಿರ್ಜಲೀಕರಣ
ಮಸಾಲೆಯುಕ್ತ ಆಹಾರಗಳು ಅತಿಸಾರಕ್ಕೆ ಕಾರಣವಾಗಬಹುದು, ಇದು ನಿರ್ಜಲೀಕರಣ ಮತ್ತು ಎಲೆಕ್ಟ್ರೋಲೈಟ್ ಅಸಮತೋಲನಕ್ಕೆ ಕಾರಣವಾಗಬಹುದು, ಇದು ಗರ್ಭಾವಸ್ಥೆಯಲ್ಲಿ ಸಮಸ್ಯೆಯಾಗಬಹುದು.

ಭ್ರೂಣದ ಹೃದಯ ಬಡಿತ
ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ಭ್ರೂಣದ ಹೃದಯ ಬಡಿತ ಹೆಚ್ಚಾಗಬಹುದು, ಇದು ಕೆಲವು ಗರ್ಭಾವಸ್ಥೆಯಲ್ಲಿ ಭಯವನ್ನು ಉಂಟು ಮಾಡುತ್ತದೆ .












