ಕೆಲವೇ ದಿನಗಳ ಹಿಂದೆ ಭಾರತದ ಚುನಾವಣೆಯಲ್ಲಿ (Indian election) ಇತರೆ ದೇಶಗಳು ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಹಣದ ಹೊಳೆಯನ್ನೇ ಹರಿಸಿವೆ ಎಂದು ವಿಶ್ವದ ನಂಬರ್ ಒನ್ ಶ್ರೀಮಂತ ಎಲಾನ್ ಮಸ್ಕ್ (Elon musk) ಹೊಸ ಬಾಂಬ್ ಸಿಡಿದ್ದರು. ಆ ಬೆನ್ನಲ್ಲೇ ಈಗ ಅಮೆರಿಕ ಅಧ್ಯಕ್ಷ ಡಿನಾಲ್ಡ್ ಟ್ರಂಪ್ (Donald trump) ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

ಹೌದು, ಪ್ರಧಾನಿ ಮೋದಿಯನ್ನು (Pm modi) ಚುನಾವಣೆಯಲ್ಲಿ ಸೋಲಿಸಲು, ಅವರ ವಿರುದ್ಧದ ಅಭ್ಯರ್ಥಿಯನ್ನು ಗೆಲ್ಲುವಂತೆ ಮಾಡಲು ಅಮೆರಿಕದ ಈ ಹಿಂದಿನ ಬೈಡನ್ ಸರ್ಕಾರ ಭಾರತದ ಚುನಾವಣೆಗೆ 180 ಕೋಟಿ ರೂ. ನೀಡಿರುವ ಅನುಮಾನವಿದೆ ಎಂದು ಟ್ರಂಪ್ ಆರೋಪ ಮಾಡಿದ್ದಾರೆ.
ಈ ಆರೋಪ ಸಂಚಲ ಸೃಷ್ಟಿಮಾಡಿದೆ. ಭಾರತದ ಚುನಾವಣೆಗಳಲ್ಲಿ ಈ ಹಿಂದಿನ ಬೈಡನ್ ನೇತೃತ್ವದ ಅಮೆರಿಕ ಸರ್ಕಾರ ಹಸ್ತಕ್ಷೇಪ ಮಾಡುತ್ತಿತ್ತು. ಭಾರತದ ಚುನಾವಣೆಗೆ ನಾವೇಕೆ 180 ಕೋಟಿ ಖರ್ಚು ಮಾಡಬೇಕಿತ್ತು ಎಂದು ಟ್ರಂಪ್ ಪ್ರಶ್ನಿಸಿದ್ದಾರೆ.
ಹೀಗಾಗಿ ಸದ್ಯ ಟ್ರಂಪ್ ಈ ಹೇಳಿಕೆ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಅಮೆರಿಕ 1961 ರಿಂದ ನೀಡುತ್ತಿರುವ ‘US ಏಡ್’ ಅಡಿ ಹಣ ಪಡೆದ ಭಾರತೀಯರಿಗೆ ತನಿಖೆಯ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.