
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಜೆಪಿ ದರ್ಬಾರ್ ಶುರುವಾಗಿದೆ. ದೆಹಲಿಯ ಮುಖ್ಯಮಂತ್ರಿ ಆಗಿ ಇವತ್ತು ರೇಖಾ ಗುಪ್ತ ದೆಹಲಿಯಲ್ಲಿ 4ನೇ ಮಹಿಳಾ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಮಲೀಲಾ ಮೈದಾನದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಈಶ್ವರನ ಹೆಸರಲ್ಲಿ ರೇಖಾ ಗುಪ್ತ ಪ್ರತಿಜ್ಞಾವಿಧಿ ಸ್ವೀಕರಿಸಿದ್ದಾರೆ.. ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಪ್ರಮಾಣ ವಚನ ಬೋಧಿಸಿದ್ರು..

ರೇಖಾ ಗುಪ್ತಾ ಅವರೊಂದಿಗೆ ಪರ್ವೇಶ್ ವರ್ಮಾ, ಆಶಿಶ್ ಸೂದ್, ಮಂಜಿಂದರ್ ಸಿಂಗ್ ಸಿರ್ಸಾ, ಕಪಿಲ್ ಮಿಶ್ರಾ, ರವೀಂದರ್ ಇಂದ್ರಜ್ ಸಿಂಗ್ ಮತ್ತು ಪಂಕಜ್ ಸಿಂಗ್ ದೆಹಲಿಯ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ಕೇಂದ್ರ ಸಚಿವರು, ಬಿಜೆಪಿ ಆಡಳಿತ ಇರೋ ರಾಜ್ಯಗಳ ಸಿಎಂಗಳು.. ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಭಾಗಿಯಾಗಿ ನೂತನ ಸರ್ಕಾರಕ್ಕೆ ಶುಭಹಾರೈಸಿದ್ರು..
ಪ್ರಮಾಣ ವಚನ ಸ್ವೀಕಾರ ಬಳಿಕ ಸಿಎಂ ಅಧಿಕೃತ ಕಚೇರಿಗೆ ತೆರಳಿದ ಸಿಎಂ ರೇಖಾ ಗುಪ್ತ ವಿಕಸಿತ ದೆಹಲಿಗಾಗಿ ನಿಷ್ಠೆಯಿಂದ ಕೆಲಸ ಮಾಡುವುದಾಗಿ ಹೇಳಿದ್ರು.. ವಿಕಸಿತ ದೆಹಲಿಯ ಧ್ಯೇಯ ಸಾಧಿಸಬೇಕು, ಅದಕ್ಕಾಗಿ ನಿರಂತರವಾಗಿ ಕೆಲಸ ಮಾಡುತ್ತೇವೆ. ಒಂದು ದಿನವೂ ವ್ಯರ್ಥ ಮಾಡುವುದಿಲ್ಲ. ನಾವು ಕೊಟ್ಟ ಭರವಸೆಗಳನ್ನೆಲ್ಲಾ ಈಡೇರಿಸುತ್ತೇವೆ ಎಂದಿದ್ದಾರೆ. ದೆಹಲಿ ನೂತನ ಸಿಎಂ ರೇಖಾ ಗುಪ್ತ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಎಕ್ಸ್ನಲ್ಲಿ ಅಭಿನಂದಿಸಿದ್ದಾರೆ..

ರೇಖಾ ಗುಪ್ತಾ ಅವರು ತಳಮಟ್ಟದಿಂದ ಬೆಳೆದು ಬಂದವರು. ಕ್ಯಾಂಪಸ್ ರಾಜಕೀಯ, ರಾಜ್ಯ ಸಂಘಟನೆ, ಪುರಸಭೆ ಆಡಳಿತದಲ್ಲಿ ಸಕ್ರಿಯರಾಗಿದ್ದಾರೆ ಮತ್ತು ಈಗ ಶಾಸಕಿ ಹಾಗೂ ಮುಖ್ಯಮಂತ್ರಿಯಾಗಿದ್ದಾರೆ. ದೆಹಲಿಯ ಅಭಿವೃದ್ಧಿಗಾಗಿ ಅವರು ಮತ್ತಷ್ಟು ಉತ್ಸಾಹದಿಂದ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ. ಅವರ ಅಧಿಕಾರಾವಧಿ ಫಲಪ್ರದವಾಗಲಿ ಎಂದು ಹಾರೈಸುವೆ ಎಂದಿದ್ದಾರೆ.
ದೆಹಲಿ ಬಿಜೆಪಿ ಮಾಜಿ ಅಧ್ಯಕ್ಷ ವಿಜೇಂದ್ರ ಗುಪ್ತ ಅವರು ವಿಧಾನಸಭಾ ಸ್ಪೀಕರ್ ಆಗುವುದು ಬಹುತೇಕ ಖಚಿತವಾಗಿ… ಉಪಸಭಾಪತಿ ಹುದ್ದೆಗೆ ಮೋಹನ್ ಸಿಂಗ್ ಬಿಶ್ತ್ ಅವರ ಹೆಸರನ್ನು ಘೋಷಿಸಲಾಗಿದೆ.. ಒಟ್ಟಾರೆ 26 ವರ್ಷಗಳ ಬಳಿಕ ದೆಹಲಿಯಲ್ಲಿ ಕೇಸರಿ ಯುಗ ಆರಂಭವಾಗಿದ್ದು ಡಬಲ್ ಇಂಜಿನ್ ಸರ್ಕಾರದ ಬಗ್ಗೆ ಭಾರೀ ನಿರೀಕ್ಷೆ ಮೂಡಿಸಿದೆ.

ಪ್ರಮಾಣ ವಚನ ಸಮಾರಂಭದಲ್ಲಿ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಕೈ ಹಿಡಿದು ನಗುನಗುತ್ತ ಮಾತಾಡಿದ ಪ್ರಧಾನಿ ಮೋದಿ, ಕೇಸರಿ ಉಡುಪಿನಲ್ಲಿದ್ದ ಪವನ್ ಕಲ್ಯಾಣ್ ಅವರನ್ನ ನೋಡಿ, ನೀನು ಮತ್ತೊಬ್ಬ ಯೋಗಿ ಆದಿತ್ಯನಾಥ್ ಆಗ್ತಿದ್ಯಾ..? ಹಿಮಾಲಯಕ್ಕೆ ಹೋಗ್ತಿದ್ಯಾ ಅಂತ ಕೇಳಿದ್ರು ಅಂತೆಲ್ಲಾ ಜನ ಜಾಲತಾಣದಲ್ಲಿ ಕಮೆಂಟ್ ಮಾಡ್ತಿದ್ದಾರೆ..