ಕುತ್ತಿಗೆ ನೋವು ಅನ್ನುವಂತದು ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಕ್ಕೆ ಕಾಡುವಂತಹ ಕಾಮನ್ ಸಮಸ್ಯೆಯಾಗಿದೆ. ಅದ್ರಲ್ಲೂ ಕೆಲವರಿಗಂತು ಸಹಿಸಲಾಗದಷ್ಟು ನೋವು ಕಾಡುತ್ತದೆ. ಕುತ್ತಿಗೆ ನೋವು ಶುರುವಾಗಲು ಅನೇಕ ಕಾರಣಗಳಿರಬಹುದು ಮಲಗುವ ಭಂಗಿ, ನರ ಸೆಳೆತ, ಅತಿ ಹೆಚ್ಚು ಕಾಲ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವಂತದ್ದು ಹೀಗೆ ಸಾಕಷ್ಟು.. ಈ ನೋವು ಕಾಣಿಸಿಕೊಂಡಾಗ ಗಾಬರಿಯಾಗದೆ ಈ ಸಿಂಪಲ್ ಮನೆಮದ್ದನ್ನು ಟ್ರೈ ಮಾಡಿ ಕುತ್ತಿಗೆ ನೋವಿಗೆ ಗುಡ್ ಬೈ ಹೇಳಿ.

ಬಿಸಿನೀರು
ಕುತ್ತಿಗೆ ನೋವು ಕಾಣಿಸಿಕೊಂಡಾಗ ಮೊದಲು ಮಾಡಬೇಕಾದಂತಹ ಕೆಲಸ ಬಿಸಿ ನೀರಿನ ಕುತ್ತಿಗೆ ಮೇಲೆ ಹಾಕಿಕೊಳ್ಳುವಂಥದ್ದು ಅಥವಾ ಹಾಟ್ ವಾಟರ್ ಬ್ಯಾಗನ್ನು ಕುತ್ತಿಗೆ ಮೇಲೆ ಇಡುವುದರಿಂದ ನೋವು ಕಡಿಮೆಯಾಗುತ್ತದೆ.
ಅರಿಶಿಣ
ಒಂದು ಟೇಬಲ್ ಸ್ಪೂನ್ ನಷ್ಟು ಅರಿಶಿನವನ್ನು ಎರಡರಿಂದ ಮೂರು ಟೇಬಲ್ ಸ್ಪೂನ್ ಅಷ್ಟು ಬಿಸಿ ಹಾಲಿನೊಂದಿಗೆ ಬೆರೆಸಿ ಚೆನ್ನಾಗಿ ಮಿಶ್ರಣ ತಯಾರಿಸಿಕೊಳ್ಳಿ ನಂತರ ಆ ಮಿಶ್ರಣವನ್ನು ಕುತ್ತಿಗೆ ಭಾಗದಲ್ಲಿ ಹಚ್ಚಿ ಅರ್ಧ ಗಂಟೆಗಳ ಕಾಲ ಬಿಟ್ಟು ನಂತರ ಸ್ನಾನ ಮಾಡುವುದರಿಂದ ಕುತ್ತಿಗೆ ನೋವು ಕಡಿಮೆಯಾಗುತ್ತದೆ. ಅರಿಶಿಣದಲ್ಲಿ ನೋವನ್ನ ಹೀರಿಕೊಳ್ಳುವಂತ ಶಕ್ತಿ ಇರುತ್ತದೆ.

ಲ್ಯಾವೆಂಡರ್ ಎಣ್ಣೆ
ಲ್ಯಾವೆಂಡರ್ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ನಂತರ ಕುತ್ತಿಗೆ ಭಾಗಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ ಹಾಗೂ ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ತಕ್ಷಣಕ್ಕೆ ಕುತ್ತಿಗೆ ನೋವು ಕಡಿಮೆಯಾಗುತ್ತದೆ.
ಉಪ್ಪಿನ ಶಾಖ
ಒಂದು ಮುಷ್ಟಿಯಷ್ಟು ಕಲ್ಲುಪ್ಪನ್ನು ಚೆನ್ನಾಗಿ ಬಿಸಿ ಮಾಡಿ ನಂತರ ಒಂದು ಬಿಳಿ ಬಟ್ಟೆಯಲ್ಲಿ ಆ ಉಪ್ಪನ್ನ ಹಾಕಿ ಕಟ್ಟಿ ಅದರಿಂದ ಕುತ್ತಿಗೆ ಭಾಗಕ್ಕೆ ಶಾಖ ಕೊಡುವುದರಿಂದ ನೋವು ಕಡಿಮೆಯಾಗುತ್ತದೆ.