ರಾಜ್ಯದಲ್ಲಿ ಕಾಂಗ್ರೆಸ್ (Congress) ಆಂತರಿಕ ಕಿತ್ತಾಟ ಇದೀಗ ಬೀದಿಗೆ ಬಂದಂತಿದೆ. ಒಂದೆಡೆ ಸಿಎಂ ರೇಸ್ ನಲ್ಲಿರುವ ಡಿಕೆ ಶಿವಕುಮಾರ್ (Dk shivakumar) ಅವರ ಕೆಪಿಸಿಸಿ ಅಧ್ಯಕ್ಷ (KPCC President) ಸ್ಥಾನದ ಮೇಲೆ ಹಲವರ ಕಣ್ಣು ಬಿದ್ದಿದೆ.

ಈ ಮಧ್ಯೆ ಕೆಲ ಸಚಿವರು, ನಾಯಕರು ಬಹಿರಂಗವಾಗಿಯೇ ಡಿಕೆ ಶಿವಕುಮಾರ್ ವಿರುದ್ಧ ಗುಡುಗಿದ್ದಾರೆ. ಆದ್ರೆ ಸದ್ಯ ಡಿಕೆ ಶಿವಕುಮಾರ್ ಮೌನ ವಹಿಸಿದ್ದು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇಷ್ಟೆಲ್ಲಾ ರಾಜಕೀಯ ಜಂಜಾಟಗಳ ಮಧ್ಯೆ ಡಿಸಿಎಂ ರನ್ನ ಸದ್ಗುರು ಜಗ್ಗಿ ವಾಸುದೇವ್ ಭೇಟಿಯಾಗಿದ್ದಾರೆ.

ಹೌದು, ಈಶ ಫೌಂಡೇಶನ್ ನ ಸದ್ಗುರು ಜಗ್ಗಿ ವಸುದೇವ್ ಅವರು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಬುಧವಾರ (ಫೆ 19) ರಾತ್ರಿ ಭೇಟಿ ಮಾಡಿದ್ದಾರೆ. ಈ ವೇಳೆ ಡಿಕೆ ಶಿವಕುಮಾರ್ ಅವರ ಪತ್ನಿ ಉಷಾ ಅವರು ಕೂಡ ಉಪಸ್ಥಿತರಿದ್ದರು.
ಇನ್ನೇನು ಶಿವರಾತ್ರಿ ಸಮೀಪದಲ್ಲಿರುವ ಹಿನ್ನಲೆ, ಈಶಾ ಫೌಂಡೇಶನ್ ನಲ್ಲಿ ಶಿವರಾತ್ರಿಯ ಆಚರಣೆಯಲ್ಲಿ ಭಾಗಿಯಾಗುವಂತೆ ಡಿಸಿಎಂ ಡಿಕೆ ಶಿವಕುಮಾರ್ ರನ್ನ ಆಹ್ವಾನಿಸುವ ನಿಟ್ಟಿನಲ್ಲಿ ಸದ್ಗುರು ಡಿಕೆ ಶಿವಕುಮಾರ್ ರನ್ನ ಭೇಟಿ ಮಾಡಿರಬಹುದು ಎಂಬ ಮಾಹಿತಿ ಲಭ್ಯವಾಗಿದೆ.