
ಹಾಸನ: ಹಾಸನದಲ್ಲಿ ಮೈಕ್ರೋ ಫೈನಾನ್ಸ್(Micro Finance)ಅಟ್ಟಹಾಸ ಮುಂದುವರಿದಿದೆ. ಸಾಲ ಮರುಪಾವತಿ ಮಾಡದ್ದಕ್ಕೆ ಮನೆಗೆ ಬೀಗ ಹಾಕಿದ್ದಾರೆ ಮೈಕ್ರೋ ಫೈನಾನ್ಸ್(Micro Finance)ಸಿಬ್ಬಂದಿ. ಮನೆ ನಿರ್ಮಾಣಕ್ಕೆ ಮಂಜೇಗೌಡ(Manjegowda) ಕುಟುಂಬ 9 ಲಕ್ಷ ಸಾಲ ಮಾಡಿಕೊಂಡಿತ್ತು. ಸಾಲ ಮರುಪಾವತಿ ಮಾಡದ್ದಕ್ಕೆ ಮನೆಗೆ ಬೀಗ ಹಾಕಿದ್ದರು.
ಹಾಸನ ತಾಲ್ಲೂಕಿನ ದೊಡ್ಡ ಆಲದಹಳ್ಳಿ ಗ್ರಾಮದಲ್ಲಿ ಆರು ತಿಂಗಳ ಹಿಂದೆಯೇ ಮನೆಗೆ ಬೀಗ ಹಾಕಲಾಗಿತ್ತು. ಮನೆಯಿಲ್ಲದೆ ಬೀದಿಪಾಲಾಗಿದ್ದ ಮಂಜೇಗೌಡ(Manjegowda)ಕುಟುಂಬ ಕೊಟ್ಟಿಗೆಯಲ್ಲಿ ನೆಲೆಸಿತ್ತು. ಮನೆ ಗೃಹ ಪ್ರವೇಶಕ್ಕು ಮುನ್ನವೇ ಮನೆ ಸೀಝ್ ಮಾಡಿದ್ದರು. ಮನೆ ನಿರ್ಮಾಣದ ವೇಳೆ ಮಗನಿಗೆ ಅಪಘಾತವಾಗಿ ಸಂಕಷ್ಟ ಎದುರಾಗಿದ್ದರಿಂದ ಸಾಲ ಕಟ್ಟಲಾಗದೆ ಸಂಕಷ್ಟಕ್ಕೆ ಸಿಲುಕಿತ್ತು ಕುಟುಂಬ.
ಫೈನಾನ್ಸ್(Finance) ಕಂಪನಿ ಕರುಣೆ ತೋರಿಸದೆ ಮನೆಗೆ ಬೀಗ ಹಾಕಿ ಸೀಜ್ ಮಾಡಿತ್ತು. ಆಧಾರ್ ಹೌಸಿಂಗ್ ಫೈನಾನ್ಸ್‌ನಿಂದ ಸಾಲ ಪಡೆದಿದ್ದ ಕುಟುಂಬ, ಸಾಲ ಕಟ್ಟಲಾಗದೆ ಆರು ತಿಂಗಳಿಂದ ಕೊಟ್ಟಿಗೆಯಲ್ಲಿ ನೆಲೆಸಿತ್ತು. ಇದೀಗ ರೈತ ಸಂಘದ ಮುಖಂಡರು, ಮನೆಗೆ ಹಾಕಿದ್ದ ಬೀಗ ಒಡೆದು ಹಾಕಿದ್ದಾರೆ. ಮೈಕ್ರೋ ಫೈನಾನ್ಸ್ ಮನೆಗೆ ಹಾಕಿದ್ದ ಮೂರು ಬೀಗಗಳನ್ನು ಒಡೆದು ರೈತ ಕುಟುಂಬವನ್ನು ಮನೆಗೆ ಕಳುಹಿಸಿದ್ದಾರೆ.

ರೈತ ಸಂಘದ ಮುಖಂಡರು ಹಾಗೂ ಕಾರ್ಯಕರ್ತರು ಒಟ್ಟಾಗಿ ಬೀಗ ಒಡೆದು ಹಾಕಿದ್ದಾರೆ. ಮಂಜೇಗೌಡ((Manjegowda) ಕುಟುಂಬಸ್ಥರನ್ನು ಮನೆಯೊಳಗೆ ಕಳುಹಿಸಿದ್ದಾರೆ. ರೈತ ಸಂಘದ ಮುಖಂಡ ಕಣಗಾಲ್ ಮೂರ್ತಿ ನೇತೃತ್ವದಲ್ಲಿ ಮನೆಗೆ ಹಾಕಿದ್ದ ಬೀಗ ಒಡೆದು,ರೈತ ಮಂಜೇಗೌಡ ಕುಟುಂಬಸ್ಥರು ಮನೆಯೊಳಗೆ ಕಳುಹಿಸಿದ್ದಾರೆ.