ಭದ್ರಾವತಿಯ (Bhadravathi) ಕಾಂಗ್ರೆಸ್ ಶಾಸಕ ಸಂಗಮೇಶ (MLA sangamesh) ಪುತ್ರ ಮಹಿಳಾ ಅಧಿಕಾರಿ ವಿರುದ್ಧ ಅವಾಚ್ಯ ಪದ ಬಳಸಿ ನಿಂದನೆ ಮಾಡಿ ಅವಾಜ್ ಹಾಕಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಚಿವ ರಾಜಣ್ಣ (Minister K N Rajanna) ಶಾಸಕನ ಪುತ್ರನ ವರ್ತನೆಯ ವಿರುದ್ಧ ಕಿಡಿಕಾರಿದ್ದಾರೆ.

ಅದು ಯಾರೇ ಆಗಲಿ,ಅಧಿಕಾರಿಗಳ ವಿರುದ್ಧ ಹಾಗೆ ಮಾತನಾಡಬಾರದು. ಇಂಥವರಿಗೆ ಕಾನೂನಿನ ಪ್ರಕಾರ ಶಿಕ್ಷೆ ಆಗಲೇಬೇಕು ಅಂತಾ ಸಚಿವ ರಾಜಣ್ಣ ಕಿಡಿಕಾರಿದ್ದಾರೆ. ಈ ಬಗ್ಗೆ ಬೆಂಗಳೂರಲ್ಲಿ ಮಾತನಾಡಿದ ಅವರು ಮಿನಿಸ್ಟರ್ ಆಗಲೀ, ಶಾಸಕ ಆಗಲೀ, ಶಾಸಕನ ಮಗ ಆಗಲಿ ಯಾರೂ ಮಹಿಳಾ ಅಧಿಕಾರಿಗೆ ಹಾಗೆ ಮಾತನಾಡಬಾರದು ಎಂದಿದ್ದಾರೆ.

ಈ ರೀತಿ ಸರ್ಕಾರಿ ಅಧಿಕಾರಿಗಳ ವಿರುದ್ಧ ದರ್ಪದ ವರ್ತನೆ ತೋರುವವರಿಗೆ ಕಾನೂನಿನ ಅಡಿಯಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಆಗಬೇಕು ಎಂದು ಸಚಿವ ಕೆ ಎನ್ ರಾಜಣ್ಣ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.