
2025ನೇ ಸಾಲಿನ ಏರೋ ಇಂಡಿಯಾ ಏರ್ ಶೋಗೆ (Aero India air show) ಚಾಲನೆ ದೊರೆತಿದೆ. ಬೆಂಗಳೂರಿನ ಯಲಹಂಕದ ಏರ್ಬೇಸ್ನಲ್ಲಿ (Yelahanka air base) ಇಂದಿನಿಂದ ಫೆಬ್ರವರಿ 14ರ ತನಕ ಏಷ್ಯಾದ ಅತಿದೊಡ್ಡ ಏರ್ ಶೋ ನಡೆಯಲಿದೆ.

ಈ ಏರ್ ಶೋ ಬಗ್ಗೆ ಮಾಹಿತಿ ನೀಡಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajanath singh), ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಬರೀ ಏರ್ ಶೋ ಅಷ್ಟೇ ಅಲ್ಲ, ಏರೋ ಇಂಡಿಯಾ ದೇಶದ ಆರ್ಥಿಕತೆ, ರಕ್ಷಣಾ ವ್ಯವಸ್ಥೆಯ ಅಭಿವೃದ್ಧಿಗೆ ಉತ್ತಮ ವೇದಿಕೆ ಅಂತ ಹೇಳಿದ್ದಾರೆ.
ಈ ಬಾರಿ ಏರ್ಶೋನಲ್ಲಿ 100 ದೇಶಗಳು ಭಾಗಿಯಾಗ್ತಿದ್ದು, 27 ದೇಶಗಳ ರಕ್ಷಣಾ ಸಚಿವರು ಸಹ ಏರ್ಶೋಗೆ ಸಾಕ್ಷಿ ಆಗಲಿದ್ದಾರೆ. ಆಗಸದಲಿ ರಷ್ಯನ್ ಮತ್ತು ಅಮೆರಿಕನ್ ಫೈಟ್ ಏರ್ಕ್ರಾಪ್ಟಗಳು (Fighter jet) ಘರ್ಜಿಸಲಿವೆ.

ಇನ್ನು 900ಕ್ಕೂ ಹೆಚ್ಚು ಉತ್ಪಾದಕರು ಭಾಗಿಯಾಗ್ತಿದ್ದು, ಎಐ, ಡ್ರೋನ್, ಸೈಬರ್ ಸೆಕ್ಯುರಿಟಿ, ಗ್ಲೋಬರ್ ಏರೋಸ್ಪೇಸ್, ನೂತನ ತಂತ್ರಜ್ಞಾನದ ವಿವಿಧ ಎಕ್ಸಿಬಿಷನ್ ಗಳನ್ನು ಯಲಹಂಕ ವಾಯುನೆಲೆಯಲ್ಲಿ ಕಣ್ಣುಂಬಿಕೊಳ್ಳುವ ಅವಕಾಶ ಇರಲಿದೆ. ಈ ಏರ್ಶೋನಲ್ಲಿ 7 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸೋ ನಿರೀಕ್ಷೆ ಇದೆ