ಬಸ್ ಟಿಕೆಟ್ ದರ ಏರಿಕೆ (Bus ticket price hike) ಬೆನ್ನಲ್ಲೇ ಈಗ ಬೆಂಗಳೂರು ಮೆಟ್ರೋ (Bengaluru metro) ಪ್ರಯಾಣಿಕರಿಗೆ BMRCL ಮತ್ತೊಂದು ಶಾಕ್ ಕೊಟ್ಟಿದೆ. BMTC ಬಸ್ ಟಿಕೆಟ್ ದರ ಏರಿಕೆ ಬೆನ್ನಲ್ಲೇ ಮೆಟ್ರೊ ಪ್ರಯಾಣ ಟಿಕೆಟ್ ದರ ಕೂಡ ದುಬಾರಿ ಆಗಿದೆ.

ಇಂದಿನಿಂದಲೇ (ಫೆ 9) ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಯಾಗಿದೆ. ಮೆಟ್ರೋ ಟಿಕೆಟ್ ದರದಲ್ಲಿ BMRCL 46% ಏರಿಕೆ ಮಾಡಿದೆ. ಮೆಟ್ರೋ ಪ್ರಯಾಣ ದರ ಗರಿಷ್ಠ 90 ರೂಪಾಯಿ, ಕನಿಷ್ಠ 10 ರೂಪಾಯಿ ಆಗಿದೆ.
ಭಾನುವಾರ ಹಾಗೂ ರಾಷ್ಟ್ರೀಯ ರಜಾ ದಿನಗಳಲ್ಲಿ ಏಕರೂಪ ಸ್ಮಾರ್ಟ್ ಕಾರ್ಡಿಗೆ 10% ರಿಯಾಯಿತಿ ಪ್ರಕಟಿಸಲಾಗಿದೆ. ಸ್ಮಾರ್ಟ್ ಕಾರ್ಡಿನಲ್ಲಿ ಕನಿಷ್ಠ 90 ರೂಪಾಯಿ ಬ್ಯಾಲೆನ್ಸ್ ಕಡ್ಡಾಯ ಮಾಡಲಾಗಿದೆ.
ಇನ್ನು BMRCLನ ಪರಿಷ್ಕೃತ ದರದಿಂದ ಪ್ರಯಾಣಿಕರಿಗೆ ಹೊರೆಯಾಗಿದೆ.