ದೆಹಲಿಯಲ್ಲಿ ಬಂಡಾಯರು ಬೀಡುಬಿಟ್ಟಿದ್ದು, ಬಂಡಾಯ ಟೀಂ ನಾಯಕ ಯತ್ನಾಳ್ ಕೂಡ ದೆಹಲಿಗೆ ತೆರಳಿದ್ದಾರೆ. ದೆಹಲಿಗೆ ತೆರಳುವ ಮುನ್ನ ಮಾಧ್ಯಮಗಳ ಜೊತೆಗೆ ಮಾತನಾಡಿದ ಯತ್ನಾಳ್, ವಿಜಯೇಂದ್ರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ರಾಜ್ಯಾಧ್ಯಕ್ಷನಾಗಿ ನಾನೇ ಮುಂದುವರೆಯತ್ತೆನೆ ಅನ್ನೊ ಬಿ.ವೈ ವಿಜಯೇಂದ್ರ ಹೇಳಿಕೆಗೆ ಕೌಂಟರ್ ಕೊಟ್ಟಿದ್ದು, ಮೊದಲು ರಾಜ್ಯಧ್ಯಕ್ಷ ಸ್ಥಾನಕ್ಕೆ ಚುನಾವಣೆಯಾಗಲಿ, ಅಲ್ಲಿಯವರೆಗೂ ಕೈ ಮುಗಿದುಕೊಂಡು ಓಡಾಡಲಿ ಎಂದಿದ್ದಾರೆ.
ನಮ್ಮಲ್ಲಿ ತೀರ್ಮಾನ ಮಾಡಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿ ಹಾಕ್ತೆವೆ ಎಂದಿರುವ ಯತ್ನಾಳ್, ಲಿಂಗಾಯತ ಕೋಟಾ ಬಂದ್ರೆ ಐ ಆ್ಯಮ್ ರೆಡಿ ಎಂದಿದ್ದಾರೆ. ನಮಗೆ ಎಲ್ಲಾ ರಾಷ್ಟ್ರೀಯ ನಾಯಕರು ಸಮಯ ನೀಡಿದ್ದಾರೆ. ಸುಮ್ನೆ ದೆಹಲಿಗೆ ಹೋಗೊಕೆ ನಾವೇನು ಹುಚ್ಚರಾ…? ಎಂದಿರುವ ಯತ್ನಾಳ್, ಯಾರು ತೆಲೆ ಕೆಡಿಸಿಕೊಳ್ಳಬೇಡಿ ಎಲ್ಲ ಒಳೆಯದಾಗುತ್ತೆ ಎಂದಿದ್ದಾರೆ. ವಿಜಯೇಂದ್ರ ಹೋದ್ರೆ ನಾಲ್ಕೈದು ದಿನದಲ್ಲಿ ಪಾರ್ಟಿಯಲ್ಲಿ ಎಲ್ಲವೂ ಒಳ್ಳೆಯದಾಗುತ್ತದೆ ಎನ್ನುವ ಮೂಲಕ ವಿಜಯೇಂದ್ರರನ್ನು ಹೊರಹಾಕ್ತೀವಿ ಅನ್ನೋ ಸುಳಿವು ನೀಡಿದ್ದಾರೆ.
ನಮ್ಮದು ಮೂರು ಅಜೆಂಡಾ ಇದೆ, ಹಿಂದುತ್ವ, ಕುಟುಂಬ ರಾಜಕಾರಣ, ಭ್ರಷ್ಟಾಚಾರದ ವಿರುದ್ದ ನಮ್ಮ ಹೋರಾಟ. ಕೇಂದ್ರದ ನಾಯಕರು ಇದಕ್ಕೆ ಉತ್ತರ ನೀಡಬೇಕು. ಕುಟುಂಬ ರಾಜಕಾರಣದ ಬಗ್ಗೆ ಮಾತನಾಡ್ತಿರಿ. ಇಲ್ಲಿ ಯಡಿಯೂರಪ್ಪ ಮಗನ್ನ ಅಧ್ಯಕ್ಷ ಮಾಡಿದ್ದಿರಿ. ಹೀಗೆಲ್ಲಾ ಮಾಡೋದಿದ್ದರೇ ಇನ್ಮೇಲೆ ಕುಟುಂಬ ರಾಜಕಾರಣ, ಭ್ರಷ್ಟಾಚಾರ, ಹಿಂದುತ್ವ ಬಗ್ಗೆ ಮಾತನಾಡಬೇಡಿ ಎಂದು ಕೇಂದ್ರದ ನಾಯಕರ ವಿರುದ್ಧವೂ ಗುಡುಗಿದ್ದಾರೆ.
ಯತ್ನಾಳ್‌ರಿಂದ ಪಕ್ಷಕ್ಕೆ ಡ್ಯಾಮೇಜ್ ಆಗಿ ಹೋಗಿದೆ ಎನ್ನುವ ವಿಜಯೇಂದ್ರ ಹೇಳಿಕೆಗೆ ಶಾಸಕ ಯತ್ನಾಳ್ ತಿರುಗೇಟು ಕೊಟ್ಟಿದ್ದು, ನಮ್ಮಿಂದ ಪಕ್ಷಕ್ಕೆ ಡ್ಯಾಮೇಜ್ ಆಗಿಲ್ಲ. ಯತ್ನಾಳರಿಂದಲೇ ನಮ್ಮ ಪಾರ್ಟಿಯ ಕಾರ್ಯಕರ್ತರು ಜೀವಂತವಾಗಿದ್ದಾರೆ. ನಮಗೆ ಬೇರೆಯವರಂತೆ ದೇಶ ವಿದೇಶಗಳಲ್ಲಿ ಆಸ್ತಿ ಮಾಡಿಡುವ ಆಸಕ್ತಿ ಇಲ್ಲ. ವಿಜಯೇಂದ್ರ ದುಬೈನಲ್ಲಿ, ಸಿಂಗಾಪೂರನಲ್ಲಿ ಆಸ್ತಿ ಮಾಡಿಟ್ಟು ಏನು ಮಾಡ್ತಾನೆ. ಜನರಿಗೆ ದಾನ ಕೊಡು ಒಳ್ಳೆಯದಾಗುತ್ತೆ. ಆದ್ರೆ ಯಾರಿಗಾದರೂ ಒಳ್ಳೆಯದಾಗಲಿ ಅಂತ ಹೇಳೊಕೆ ಅವರಿಂದ ಸಾಧ್ಯವೇ ಇಲ್ಲ ಎಂದ ವ್ಯಂಗ್ಯವಾಡಿದ್ದಾರೆ.
ನಾನೇ ರಾಜ್ಯಾಧ್ಯಕ್ಷನಾಗಿ ಮುಂದುವರೆಯುತ್ತೇನೆ ಎನ್ನುವ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಚುನಾವಣೆ ನಡೆದು ಅವರೇ ರಾಜ್ಯಾಧ್ಯಕ್ಷ ಮತ್ತೊಮ್ಮೆ ಆಗಲಿ.. ಬೇಡ ಅಂದವರಾರು ? ಅಲ್ಲಿವರೆಗೂ ನನಗೆ ಓಟ್ ಹಾಕಿ ನನಗೆ ಓಟ್ ಹಾಕಿ ಅಂತ ಕೈ ಮುಗಿದು ಅವರು ಓಡಾಡಬೇಕಲ್ವಾ ? ಕೆಲವರಿಗೆ ಕೈ ಮುಗಿಯೋದಾದ್ರೂ ನಾವು ಕಲಿಸದಂಗೆ ಆಗುತ್ತೆ ಅಲ್ವಾ..? ನಮ್ಮ ಬಣದಿಂದ ಯಾರು ಸ್ಪರ್ದೆ ಮಾಡ್ತಿವಿ ಅನ್ನೋದು ಚರ್ಚೆ ಮಾಡಿ ನಿರ್ಣಯ ತಗೋತಿವಿ. ಹೈಕಮಾಂಡ್ ಜಾತಿ ಲೆಕ್ಕಾಚಾರ ನೋಡಿಕೊಂಡು ಅದೇ ಜಾತಿಯವರನ್ನು ನಾವು ಕಣಕ್ಕೆ ಇಳಿಸುತ್ತೇವೆ ಎಂದಿದ್ದಾರೆ.
ಶ್ರೀ ರಾಮಲು ರಾಜ್ಯಾಧ್ಯಕ್ಷ ಆದರೆ ನಮ್ಮದೇನೂ ತಕರಾರಿಲ್ಲ. ಅವರೂ ನಮ್ಮ ಮನುಷ್ಯರೇ.. ಅವರಾದ್ರೆ ನಮ್ಮ ಬೆಂಬಲ ಇರುತ್ತದೆ. ರಾಜ್ಯದ ಎಲ್ಲಾ ಸಂಸದರು ನಮ್ಮ ಜೊತೆಗಿದ್ದಾರೆ.. ವಿಜಯೇಂದ್ರ ಸಹೋದರ ಒಬ್ಬರನ್ನು ಬಿಟ್ಟು ಎಂದಿದ್ದಾರೆ. ಯತ್ನಾಳ್ ರಾಜ್ಯಾಧ್ಯಕ್ಷ ಆಗಬೇಕು ಅನ್ನೋರೂ ಇದ್ದಾರೆ.. ಏನಾಗುತ್ತೋ ನೋಡೋಣ ಎಂದಿರುವ ಯತ್ನಾಳ್, ನಾನೇನು ಇವತ್ತು ನಿನ್ನೆಯಿಂದ ರಾಜಕೀಯ ಮಾಡುತ್ತಿಲ್ಲ. ನಾನು ಯಡಿಯೂರಪ್ಪ ಸಮಕಾಲಿನವನು. ಒಂದು ವೇಳೆ ವಿಜಯೇಂದ್ರರನ್ನು ಮತ್ತೆ ರಾಜ್ಯಾಧ್ಯಕ್ಷ ಮಾಡಿದ್ರೆ ನಮ್ಮ ನಿರ್ಣಯ ತಿಳಿಸುತ್ತೇವೆ.. ನಮ್ಮ ಹೋರಾಟವಂತೂ ಮುಂದುವರೆಯುತ್ತದೆ ಎಂದಿದ್ದಾರೆ.