ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ಜಾಸ್ತಿ ಆಗಿದ್ದು, ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಜಾರಿಯ ಭರವಸೆ ನೀಡಿತ್ತು. ಇದೀಗ ರಾಜ್ಯ ಸರ್ಕಾರ ಮೈಕ್ರೋ ಫೈನಾನ್ಸ್ ಬಿಲ್ ರೆಡಿ ಮಾಡಿ ರಾಜ್ಯಪಾಲರ ಸಹಿಗಾಗಿ ಕಳುಹಿಸಿಕೊಟ್ಟಿದೆ. ಸುಗ್ರೀವಾಜ್ಞೆ ಮೂಲಕ ರಾಜ್ಯಪಾಲರ ಅಂಗಳ ತಲುಪಿದ್ದು, ಕರಡು ಪ್ರತಿ ಪರಿಶೀಲನೆ ಬಳಿಕ ರಾಜ್ಯಪಾಲರು ಸಹಿ ಹಾಕಲಿದ್ದಾರೆರ. ಇಂದು ಮಧ್ಯಾಹ್ನ ಕರಡು ಪ್ರತಿ ಪರಿಶೀಲಿಸಿದ ಸಿಎಂ ಸಿದ್ದರಾಮಯ್ಯ, ಆ ಬಳಿಕ ರಾಜ್ಯಪಾಲರಿಗೆ ಬಿಲ್ ತಲುಪಿಸಿದ್ದಾರೆ.
ಈ ನಡುವೆ ಹಾವೇರಿಯಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ವ್ಯಕ್ತಿಯೊಬ್ಬ ಬಲಿಯಾಗಿದ್ದಾನೆ. ನೇಣು ಬಿಗಿದುಕೊಂಡು ರಾಣೇಬೆನ್ನೂರಿನ ಮಾಲತೇಶ ನಾಗಪ್ಪ ಆತ್ಮಹತ್ಯೆಗೆ ಶರಣಾಗಿದ್ದಾನೆ. ಹೇರ್ ಕಟ್ಟಿಂಗ್ ಶಾಪ್ ನಡೆಸ್ತಿದ್ದ ಮಾಲತೇಶ್ 4 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ರು. ಇವತ್ತು ಸಾಲದ ಕಂತು ಕಟ್ಟಲು ಹಣ ತರಲು ಪತ್ನಿ ಗೀತಾ, ತಾಯಿ ಮನೆಗೆ ತೆರಳಿದ್ರು. ಈ ವೇಳೆ ಮನೆಯಲ್ಲಿ ಮಾಲತೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಚಿಕ್ಕಬಳ್ಳಾಪುರದಲ್ಲೂ ಫೈನಾನ್ಸ್ ಕಿರುಕುಳಕ್ಕೆ ವ್ಯಕ್ತಿಯೊಬ್ಬ ಸೂಸೈಡ್ ಮಾಡಿಕೊಂಡಿದ್ದಾರೆ. ಗೌರಿಬಿದನೂರಿನ ಹೆಚ್.ನಾಗಸಂದ್ರದಲ್ಲಿ ಘಟನೆ ನಡೆದಿದೆ. ಆಟೋ ಚಾಲಕ ನರಸಿಂಹಯ್ಯ ಮೃತ ದುರ್ದೈವಿ.. ಇಂದು ಸಾಲದ ಕಂತು ಕಟ್ಟಬೇಕಿತ್ತು. ಹಣ ತರ್ತೀನಿ ಅಂತ ಬೆಳಗ್ಗೆ 6 ಗಂಟೆಗೆ ಮನೆಯಿಂದ ನರಸಿಂಹಯ್ಯ ಹೋಗಿದ್ರು. ಆದ್ರೆ ಮನೆಯಿಂದ ಹೊರಹೋಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಗೌರಿಬಿದನೂರು ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮತ್ತೊಂದೆಡೆ, ಮೈಕ್ರೋ ಫೈನಾನ್ಸ್ನಲ್ಲಿ ಸಾಲ ಮಾಡಿದ್ದ ಗಿರೀಶ್ ಎಂಬುವವರು ಸಾಲ ಮರುಪಾವತಿ ಮಾಡಲಾಗದೇ ಸಾವನ್ನಪ್ಪಿದ್ದಾರೆ. ಮೃತರನ್ನ ಚಿಕ್ಕಬಳ್ಳಾಪುರದ ಬೀಚಗಾನಹಳ್ಳಿ ಗ್ರಾಮದ ಗಿರೀಶ್ ಎಂದು ಗುರುತಿಸಲಾಗಿದೆ. ಅನೇಕ ಫೈನಾನ್ಸ್ ಕಂಪನಿಗಳಲ್ಲಿ ಸಾಲ ಮಾಡಿಕೊಂಡಿದ್ದ ಗಿರೀಶ್ ಸಾಲ ಮರುಪಾವತಿ ಮಾಡಲಾಗದೇ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ
ದಾವಣಗೆರೆ ದೀಟೂರಿನಲ್ಲಿ ಸಾಲಬಾಧೆಯಿಂದ ನೊಂದು ರೈತ ನೇಣಿಗೆ ಶರಣಾಗಿದ್ದಾರೆ. ಬ್ಯಾಂಕ್ ನೋಟಿಸ್ ನೀಡಿದ್ದಕ್ಕೆ ನೊಂದು ರೈತ ಸುರೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬ್ಯಾಂಕೊಂದರಲ್ಲಿ ಸುರೇಶ್ 32 ಲಕ್ಷ ಸಾಲ ಮಾಡಿಕೊಂಡಿದ್ರು. ಸಾಲ ಮರುಪಾವತಿ ಮಾಡುವಂತೆ ಬ್ಯಾಂಕ್ 2 ಬಾರಿ ನೋಟಿಸ್ ನೀಡಿದೆ. ಇತ್ತ ಬೆಳೆಯೂ ಕೈಕೊಟ್ಟ ಕಾರಣ ಸಾಲ ಮರುಪಾವತಿ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಮನನೊಂದ ರೈತ ಸುರೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೈಕ್ರೋ ಫೈನಾನ್ಸ್ ಕಾಟ ತಾಳದೆ ರೈತ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹಾಸನ ಜಿಲ್ಲೆಯ ಕಂಟೇನಹಳ್ಳಿಯಲ್ಲಿ ಘಟನೆ ನಡೆದಿದೆ. ರವಿ ಕೆ.ಡಿ. ಎನ್ನುವವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿವಿಧ ಸಂಘಗಳು, ಮೈಕ್ರೋ ಫೈನಾನ್ಸ್ಗಳಿಂದ ರವಿ ಸುಮಾರು 9 ಲಕ್ಷ ಸಾಲ ಮಾಡಿಕೊಂಡಿದ್ರು. ಸಾಲ ಕಟ್ಟಲು ಒತ್ತಡ ಹೆಚ್ಚಾದ ಕಾರಣ ರವಿ ಸೂಸೈಡ್ ಮಾಡಿಕೊಂಡಿದ್ದಾರೆ. ಇನ್ನು ಶವಾಗಾರಕ್ಕೆ ಭೇಟಿ ನೀಡಿದ ಶಾಸಕ ಎ.ಮಂಜು, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲೂ ಮೈಕ್ರೋ ಫೈನಾನ್ಸ್ಗಳ ಟಾರ್ಚರ್ ಮಿತಿ ಮೀರಿದೆ. ಸೇಡಂ ತಾಲ್ಲೂಕಿನಲ್ಲಿ ಮೈಕ್ರೋ ಕಿರುಕುಳ ಹೆಚ್ಚಾಗಿದ್ದು, ಮಹಿಳೆಯರು ರೊಚ್ಚಿಗೆದ್ದಿದ್ದಾರೆ. ಬೆಳಗ್ಗೆ 7 ಗಂಟೆಗೆ ಮನೆಗೆ ಬಂದ್ರೆ, ರಾತ್ರಿ 11 ಗಂಟೆಯವರೆಗೆ ಮನೆ ಬಳಿ ನಿಲ್ತಾರೆ. ದುಡ್ಡು ಇಲ್ಲ ಅಂದ್ರೂ ಕೇಳದೆ ಮನೆ ಬಳಿ ಬಂದು ಟಾರ್ಚರ್ ಕೊಡ್ತಾರೆ.. ಸಿಎಂ ಸಿದ್ದರಾಮಯ್ಯ ಸುಗ್ರೀವಾಜ್ಞೆ ತಂದ್ರೂ ಕ್ಯಾರೆ ಅಂತಿಲ್ಲ. ಅಂತ ಮಹಿಳೆಯರು ಬೇಸರ ವ್ಯಕ್ತಪಡಿಸ್ತಿದ್ದಾರೆ.