ಕೆಲವು ಬಾರಿ ಪಾದಗಳಲ್ಲಿ ಇದ್ದಕ್ಕಿದ್ದಾಗೆ ಉರಿ ಹೆಚ್ಚಾಗುತ್ತದೆ. ಇದರಿಂದ ಓಡಾಡಲು ಹಿಂಸೆ ಆಗುತ್ತದೆ ಇರಿಟೇಶನ್ ಹೆಚ್ಚಾಗುತ್ತದೆ ಹಾಗೂ ಮಲಗುವ ಸಂದರ್ಭದಲ್ಲಿ ಪಾದಗಳಲ್ಲಿ ಉರಿ ಕಾಣಿಸಿಕೊಳ್ಳುತ್ತದೆ. ಹೀಗೆ ಆದಾಗ ಟೆನ್ಶನ್ ಮಾಡದೆ ಈ ಸಿಂಪಲ್ ಹೋಮ್ ರೆಮಿಡೀಸ್ ನ ಬಳಸುವುದರಿಂದ ಉರಿ ಕಡಿಮೆಯಾಗುತ್ತದೆ.

ತಣ್ಣೀರು
ಪಾದಗಳು ಉರಿಯುವಾಗ ಅದನ್ನು ಕಡಿಮೆ ಮಾಡಲು ನಿಮ್ಮ ಪಾದಗಳನ್ನು 15-20 ನಿಮಿಷಗಳ ಕಾಲ ತಣ್ಣೀರಿನಲ್ಲಿ ನೆನೆಸಿ.ಹಾಗೂ ಪಾದಗಳಿಗೆ ಬಟ್ಟೆಯಲ್ಲಿ ಸುತ್ತಿದ ಐಸ್ ಪ್ಯಾಕ್ ಅನ್ನು ಹಚ್ಚಿ.

ಅರಿಶಿಣ
ಒಂದು ಟೇಬಲ್ ಸ್ಪೂನ್ ಅಷ್ಟು ಅರಿಶಿಣವನ್ನು ಸರಿ ಪ್ರಮಾಣದ ನೀರಿನಲ್ಲಿ ಮಿಕ್ಸ್ ಮಾಡಿ ನಂತರ ಆ ಮಿಶ್ರಣವನ್ನು ನಿಮ್ಮ ಪಾದಗಳಿಗೆ ಹಚ್ಚಿ 30 ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ವಾಶ್ ಮಾಡುವುದರಿಂದ ಉರಿ ಕಡಿಮೆಯಾಗುತ್ತದೆ.

ಕೊಬ್ಬರಿ ಎಣ್ಣೆ
ಪಾದಗಳಲ್ಲಿ ಉರಿ ಕಾಣಿಸಿಕೊಂಡಾಗ ಎರಡು ಪಾದಗಳಿಗೂ ಕೂಡ ಒಂದು ಟೇಬಲ್ ಸ್ಪೂನ್ ಅಷ್ಟು ಕೊಬ್ಬರಿ ಎಣ್ಣೆಯನ್ನು ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ ಇಡೀ ರಾತ್ರಿ ಹಾಗೆ ಬಿಡಿ.ಇದರಿಂದ ಉರಿ ಕಡಿಮೆಯಾಗುತ್ತದೆ.

ಅಲೋವೆರಾ ಜೆಲ್
ಕೊಬ್ಬರಿ ಎಣ್ಣೆಯ ಬದಲು ಅಲೋವೆರ ಜೆಲ್ ಅನ್ನು ಕೂಡ ನೀವು ಬಳಸಬಹುದು. ಅಲೋವೆರಾ ಜೆಲ್ ಹಚ್ಚಿ ಕಣ್ಣೀರಿನಿಂದ ಪಾದಗಳನ್ನು ತೊಳೆಯಬೇಕು ಇದರಿಂದ ಬರ್ನಿಂಗ್ ಸೆನ್ಸೇಷನ್ ಕಡಿಮೆಯಾಗುತ್ತದೆ.
ಇದರ ಜೊತೆಗೆ ಹೆಚ್ಚಿನ ಮಟ್ಟದಲ್ಲಿ ನೀರನ್ನು ಕುಡಿಯುವುದರಿಂದ ಕೂಡ ಪಾದಗಳ ಉರಿ ಕಡಿಮೆಯಾಗುತ್ತದೆ.