ಮೈಸೂರಿನ ಮುಡಾ ಅಕ್ರಮ (MUDA scam) ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಲೋಕಾಯುತ ತನಿಖೆ ಪೂರ್ಣಗೊಂಡಿದ್ದು, ಜನವರಿ 25 ರಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕಿದೆ. ಆದ್ರೆ ಇದೀಗ ಈ ವರದಿಯ ಬಗ್ಗೆ ಚರ್ಚೆಗಳು ಗರಿಗೆದರಿದ್ದು, ಲೋಕಾಯುಕ್ತ (Lokayukta) ತನಿಖೆಯಲ್ಲಿ ಸಿಎಂ ಸಿದ್ದರಾಮಯ್ಯ (Cm siddaramaiah) ಮತ್ತು ಅವರ ಪತ್ನಿ ಪಾರ್ವತಿಗೆ ಕ್ಲೀನ್ ಚಿಟ್ (Clean chit) ನೀಡಲಾಗಿದೆ ಎಂಬ ಆಂತರಿಕ ಮಾಹಿತಿಗಳು ಹರಿದಾಡುತ್ತಿವೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್.ಅಶೋಕ್,ನಾನು ಇದನ್ನು ಒಂದು ವಾರದ ಮುಂಚೆಯೇ ಹೇಳಿದ್ದೆ.ಇದ್ರಲ್ಲಿ ವಿಶೇಷತೆ ಏನು ಇಲ್ಲ. ಈ ವರದಿ ನಿರೀಕ್ಷೆಯಿತ್ತು. ಯಾಕೆಂದರೆ ಲೋಕಾಯುಕ್ತ ರಾಜ್ಯ ಸರ್ಕಾರದ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಸಂಸ್ಥೆಯಾಗಿದೆ. ಅವರಿಂದ ಇನ್ನೇನು ನಿರೀಕ್ಷಿಸಲು ಸಾದ್ಯ ಎಂದು ಹೇಳಿದ್ದಾರೆ.

ಈ ಪ್ರಕರಣ ಬೆಳಕಿಗೆ ಬಂದ ದಿನದಿಂದಲೂ, ಸರ್ಕಾರ ಅಧಿಕಾರಿಗಳ ಸಹಾಯದಿಂದ ಇದನ್ನು ಮುಚ್ಚಿ ಹಾಕುವುದು ಹೇಗೆ ಎಂಬುದನ್ನೇ ಪ್ರಯತ್ನಿಸುತ್ತಿದೆ. ಹೀಗಾಗಿಯೇ ನಾವು ಸಿಬಿಐ ತನಿಖೆಗಾಗಿ ಆಗ್ರಹಿಸುತ್ತಿರುವುದು ಎಂದು ಹೇಳಿದ್ದಾರೆ.
ಇನ್ನು ಮತ್ತೊಂದೆಡೆ, ಸಿಬಿಐ ತನಿಖೆಗೆ ಕೋರಿ ಕೋರ್ಟ್ ಗೆ ಮನವಿ ಸಲ್ಲಿಸಿದ್ದ ಸ್ನೇಹಮಯಿ ಕೃಷ್ಣ ಅವರ ಅರ್ಜಿ ವಿಚಾರಣೆ ನಡೆದಿದ್ದು, ಜನವರಿ 27ರಂದು ಎ ಬಗ್ಗೆ ನ್ಯಾಯಾಲಯ ಅಂತಿಮ ತೀರ್ಪು ಪ್ರಕಟಿಸಲಿದೆ. ಹೀಗಾಗಿ ಈ ಎಲ್ಲಾ ಬೆಳವಣಿಗೆಗಳು ಕುತೂಹಲಕ್ಕೆ ಕಾರಣವಾಗಿದೆ.






