ರಾಜ್ಯ ಕಾಂಗ್ರೆಸ್ ನಲ್ಲಿ ಕೆಪಿಸಿಸಿ ಅಧ್ಯಕ್ಷರ (Kpcc president) ಬದಲಾವಣೆ ಬಗ್ಗೆ ಸಚಿವರು ಆಗ್ರಹಿಸಿದ ಹಿನ್ನಲೆ,ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ (H vishwanath) ಪ್ರತಿಕ್ರಿಯಿಸಿದ್ದಾರೆ. ಸಿಎಂ ಸಿದ್ದರಾಮಯ್ಯ (Cm siddaramaiah) ಏನೇ ಮಾಡಿದ್ರೂ ಡಿ.ಕೆ.ಶಿವಕುಮಾರ್ (Dk shivakumar) ಸಿಎಂ ಆಗೋದನ್ನ ಯಾರು ತಪ್ಪಿಸಲು ಆಗಲ್ಲ ಎಂದು ವಿಶ್ವನಾಥ್ ಹೇಳಿದ್ದಾರೆ.
ಈ ಬಗ್ಗೆ ನೇರವಾಗಿ ಸಿಎಂ ಸಿದ್ದರಾಮಯ್ಯರನ್ನು ದೂಷಿಸಿದ್ದಾರೆ.ಅನಾವಶ್ಯಕವಾಗಿ ಸಿಎಂ ಹಬ್ಬಿಸುತ್ತಿರುವ ಗೋಜಲು ಇದು. ಕಾಂಗ್ರೆಸ್ ಪಕ್ಷದ ನೇಮ್ ಅಂಡ್ ಫೇಮ್ ಹಾಳು ಮಾಡುತ್ತಿದ್ದಾರೆ.ಇವರೇನು ಕಾಂಗ್ರೆಸ್ (Congress) ಕಟ್ಟಿದವರಲ್ಲವಲ್ಲ, ಅವರಿಗೇನು ಆಗಬೇಕು ಎಂದು ವ್ಯಂಗ್ಯವಾಡಿದ್ದಾರೆ.
ಈಗ ಅವರದ್ದು ಮುಗಿಯಿತಲ್ಲ, ಇದು ಅನಾವಶ್ಯಕ. ಮಂತ್ರಿಗಳನ್ನ ಯಾರು ಕೇಳ್ತಾಯಿದ್ದಾರೆ? ಐದು ವರ್ಷ,ಮೂರು ವರ್ಷ ಯಾರು ಕೇಳ್ತಾಯಿದ್ದಾರೆ?ಸುಮ್ನೆ ಇವ್ರಿವ್ರೆ ಐದು ವರ್ಷ ಅಂತಾರೆ.ಇದೆಲ್ಲಾ ಬಾಲಿಶತನ, ನ್ಯೂಸ್‌ಸೆನ್ಸ್. 136 ಸ್ಥಾನ ಬರಲು ಡಿ.ಕೆ.ಶಿವಕುಮಾರ್ ಕೊಡುಗೆ ಇದೆ ಎಂದು ವಿಶ್ವನಾಥ್ ಹೇಳಿದ್ದಾರೆ.