ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಬದಲಾವಣೆಯ ಬಿರುಗಾಳಿ ಶುರುವಾಗಿದ್ಯಾ ಅನ್ನೋ ಅನುಮಾನ ಮೂಡಿಸುವಂತೆ ಕಾಂಗ್ರೆಸ್ ನಾಯಕರು ಮಾತನಾಡಿದ್ದಾರೆ. ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲ ಬೆಂಗಳೂರಿಗೆ ಬಂದು ಕಾಂಗ್ರೆಸ್ ನಾಯಕರ ಜೊತೆಗೆ ಸಭೆ ನಡೆಸಿದ ಬಳಿಕ ನಾಯಕರ ಮಾತಿನ ಬಿರುಗಾಳಿ ಕಾಡ್ಗಿಚ್ಚಿನಂತೆ ಹರಡಿಕೊಂಡಿದೆ. ಮುಖ್ಯಮಂತ್ರಿ ಕುರ್ಚಿ ಬದಲಾವಣೆಯ ಚರ್ಚೆ ಜೊತೆಗೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆಯೂ ಬಹುದೊಡ್ಡ ಚರ್ಚೆಗಳು ದೆಹಲಿಯಲ್ಲೂ ಶುರುವಾಗಿದೆ..

ಡಿ.ಕೆ ಶಿವಕುಮಾರ್ ಡಿಸಿಎಂ ಆಗಿದ್ದರೂ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಬಿಟ್ಟು ಕೊಟ್ಟಿಲ್ಲ. ಹೀಗಾಗಿ ಬೆಳಗಾವಿ ಸಾಹುಕಾರ್ ಸತೀಶ್ ಜಾರಕಿಹೊಳಿ ನೇರವಾಗಿ ಚರ್ಚೆ ಹುಟ್ಟು ಹಾಕಿದ್ದಾರೆ. ಸಿಎಂ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿರುವ ಸತೀಶ್ ಜಾರಕಿಹೊಳಿ, ಲೋಕಸಭೆ ಎಲೆಕ್ಷನ್ ಬಳಿಕ ಅಧ್ಯಕ್ಷರ ಬದಲಾವಣೆ ಅಂತಾ ಹೈಕಮಾಂಡ್ ನೋಟ್ ಇದೆ. ಅಧ್ಯಕ್ಷರನ್ನು ಬದಲಾವಣೆ ಮಾಡೋದಾದ್ರೆ ಬೇಗ ಮಾಡಬೇಕು, ಮತ ತರುವ ಸಾಮರ್ಥ್ಯ ಇದ್ದವರು ಅಧ್ಯಕ್ಷರಾಗಬೇಕು ಎಂಬ ಸಂದೇಶ ರವಾನೆ ಮಾಡಿದ್ದಾರೆ. ಯಾರೋ ಒಬ್ಬರಿಂದ ಕಾಂಗ್ರೆಸ್ ಪಕ್ಷ ಅಲ್ಲ ಎಂದು ಡಿ.ಕೆ ಶಿವಕುಮಾರ್ಗೂ ಸಂದೇಶ ರವಾನೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಬೆಳಗ್ಗೆ ಪತ್ರಿಕಾಗೋಷ್ಠಿಯಲ್ಲಿ ನಾನು ಮಾತನಾಡಿದ ಹೇಳಿಕೆ ಬಗ್ಗೆ ಕೆಲವು ಪತ್ರಿಕೆಗಳಲ್ಲಿ ಸತ್ಯಕ್ಕೆ ದೂರವಾದ ವರದಿ ಪ್ರಕಟವಾಗಿವೆ. ಸಂಜೆ ಪತ್ರಿಕೆಗಳಲ್ಲಿ ಕೆಪಿಸಿಸಿ ಹೊಸ ಅಧ್ಯಕ್ಷರಾಗಲಿ, ಸಾಹುಕಾರ ಸಮರ ಎಂದು ಪ್ರಕಟವಾಗಿವೆ. ಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ ಯಾವ ರೀತಿ ಟೀಕೆ ಟಿಪ್ಪಣೆ ಬರುತ್ತವೆ ಗೊತ್ತಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಸ್ಪಷ್ಟನೆ ನೀಡಿದ್ದಾರೆ.

ನಾನು ಡಿ.ಕೆ ಶಿವಕುಮಾರ ಬದಲಾವಣೆಗೆ ಹೇಳಿಕೆ ಕೊಟ್ಟಿಲ್ಲ. ಕೆಲವು ಹೇಳಿಕೆಯಲ್ಲಿ ಸತ್ಯಾಂಶ ಇಲ್ಲ. ಮುಂದಿನ ಸಂಘಟನೆ ದೃಷ್ಟಿಯಿಂದ ಸಲಹೆ ನೀಡಿದ್ದೇವೆ. ವೇಗದ ಸ್ಥಿತಿಯಲ್ಲಿ ನಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಪಕ್ಷದ ಹೈಕಮಾಂಡ್ ಬರಬೇಕಾಗಿತ್ತು. ಹೈಕಮಾಂಡ್ ವರಿಷ್ಠರ ಮನವೊಲಿಸಲು ನಾನು ದೆಹಲಿಗೆ ಹೋಗುತ್ತಿಲ್ಲ. ಕರ್ನಾಟಕ ಭವನದ ಕಟ್ಟಡ ಉದ್ಘಾಟನೆ ಹಿನ್ನೆಲೆಯಲ್ಲಿ ಪರಿಶೀಲನೆಗೆ ತೆರಳುತ್ತಿದ್ದೇನೆ ಎಂದಿದ್ದಾರೆ.

ನಾನು ಹೇಳಿದ್ದನ್ನು ಸೀಮಿತವಾಗಿ ಬರೆದರೆ ಒಳ್ಳೆಯದು. ನಮ್ಮ ಪಕ್ಷದಲ್ಲಿ ಹಿಂದೆ ಇದ್ದಂತೆ ಸಂಘಟನೆ ಈಗಿಲ್ಲ ಎಂದು ಹೇಳಿದ್ದೇನೆ. ನನ್ನನ್ನು ಸೇರಿದಂತೆ ನಾನು ಹೇಳಿದ್ದೇನೆ. ಹೈಕಮಾಂಡ್ ನಿರ್ಧಾರ ಎಂದು ಪದೇ ಪದೆ ಹೇಳಿದ್ದೇನೆ. ಪಕ್ಷದ ಹಿತದೃಷ್ಟಿಯಿಂದ ಈ ಪ್ರಕಟಣೆಯನ್ನು ನೀಡಿದ್ದೇವೆ. ಆದರೆ ಬೇರೆ ವಿಚಾರ ಪ್ರಕಟವಾಗಿದೆ. ಪಕ್ಷದಲ್ಲಿ ಕೆಲವು ಭಿನ್ನಾಭಿಪ್ರಾಯ ನಿರಂತರವಾಗಿ ಇದ್ದೇ ಇರುತ್ತೇವೆ. ಕಾರ್ಯಕರ್ತರಲ್ಲಿ ಗೊಂದಲ ಇರಬಾರದು ಎಂದು ಸ್ಪಷ್ಟೀಕರಣ ನೀಡಲಾಗಿದೆ ಎಂದಿದ್ದಾರೆ.










