ಮೈಸೂರಿನ ಕಾರ್ಯಕ್ರಮ ಒಂದರಲ್ಲಿ ನಟ ಪ್ರಕಾಶ್ ರಾಜ್ (Prakash raj) ಪ್ರಧಾನಿ ನರೇಂದ್ರ ಮೋದಿಯನ್ನು (Pm Narendra modi)ಮಹಾನಟ ಎಂದು ಪರೋಕ್ಷವಾಗಿ ನಟ ಪ್ರಕಾಶ್ ರಾಜ್ ವ್ಯಂಗವಾಡಿದ್ದಾರೆ.
ಮೈಸೂರಿನ (Mysuru) ಬಹುರೂಪಿ ರಂಗಾಯಣದಲ್ಲಿ ಮಾತನಾಡಿದ ಪ್ರಕಾಶ್ ರಾಜ್, ಮಹಾನಟ ಒಬ್ಬರು 24 ಗಂಟೆಗಳ ಕಾಲ ಕೆಲಸ ಮಾಡ್ತಾರೆ. ಎಲ್ & ಟಿ ಅಧ್ಯಕ್ಷ ಸುಬ್ರಮಣ್ಯನ್ ಹೇಳಿಕೆ ನೀಡಿದ್ದಾರೆ. ಭಾನುವಾರ ಯಾಕೆ ಮನೆಯಲ್ಲಿ ಕೆಲಸ ಮಾಡ್ತೀರಿ, ಎಷ್ಟು ಅಂತ ಅದೇ ಹೆಂಡತಿ ಮುಖ ನೋಡ್ತೀರಿ ಅಂತ. ಆದ್ರೆ ಅವರಿಗೆ ಹೆಂಡ್ತಿ ಇಲ್ಲ ಮನೆಯಲ್ಲಿರಲ್ಲ.ನಮಗೆ ಹೆಂಡತಿ ಇದ್ದಾರೆ ನಾವು ಮನೆಯಲ್ಲಿ ಇರ್ತೀವಿ ಎಂದು ಮೋದಿಯನ್ನು ಟೀಕಿಸಿದ್ದಾರೆ.
ಆ ಮೂಲಕ ಪರೋಕ್ಷವಾಗಿ ಮೋದಿ ಗೆ ಕುಟುಂಬ ಇಲ್ಲ. ಹೀಗಾಗಿ ಅವರು ಅಷ್ಟು ಹೊತ್ತು ಕೆಲಸ ಮಾಡಬಹುದು ಎಂಬ ಅರ್ಥ ಬರುವಂತೆ ಪ್ರಕಾಶ್ ರಾಜ್ ಮಾತನಾಡಿದ್ದಾರೆ. ಇನ್ನು ಭವಿಷ್ಯದ ಇತಿಹಾಸ ಬರೆಯುವಾಗ ತಪ್ಪು ಮಾಡಿದವರನ್ನ ಬರೆಯಬಹುದೇನೋ,ಆದರೆ ಮೌನವಾಗಿದ್ದವರನ್ನ ಯಾರೂ ಬರೆಯುವುದಿಲ್ಲ ಎಂದು ಹೇಳಿದ್ದಾರೆ.
ಈ ದೇಶಕ್ಕೆ ಅರಣ್ಯ, ಭೂಮಿ ಥರ ರಂಗಾಯಣ ಕೂಡ ಮುಖ್ಯ. ಕೆಲವರು ಇತಿಹಾಸವನ್ನ ತಿರುಚುವ ಕೆಲಸ ಮಾಡುತ್ತಿದ್ದಾರೆ. ಆದ್ರೆ ಇದಕ್ಕೆ ಅವಕಾಶ ನೀಡಬಾರದು ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.