ಬೆಳಗಾವಿಯಲ್ಲಿ (Belagavi) ಬಸ್ ಸೀಟ್ ವಿಚಾರಕ್ಕೆ ಮಹಿಳೆಯರು ಪರಸ್ಪರ ಬಡಿದಾಡಿಕೊಂಡಿರುವ ಘಟನೆ ನಡೆದಿದೆ. ಈ ಜಡೆಜಗಳದಲ್ಲಿ ಓರ್ವ ಯುವತಿಗೆ ಕುತ್ತಿಗೆ ಮುಖದ ಮುಖಕ್ಕೆ ಸಣ್ಣಪುಟ್ಟ ಗಾಯಗಳಾಗಿದೆ.
ಧಾರವಾಡ (Dharawad) ಮೂಲದ ಯುವತಿ ಕೌಶಲ್ಯ ಎಳವತ್ತಿ( 23) ಎಂಬ ಯುವತಿಗೆ ಕುತ್ತಿಗೆ ಹಾಗೂ ಮುಖಕ್ಕೆ ಗಾಯಗಳಾಗಿದೆ. ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ.
ಶಹನಾಜ ಸವನೂರ, ಕರಿಷ್ಮಾ ಸವನೂರ, ಮಹಮ್ಮದ್ ಅಜಿಮ್ ಸವನೂರ ಎಂಬವರಿಂದ ಹಲ್ಲೆ ನಡೆದಿದೆ ಎಂದು ಯುವತಿ ಆರೋಪೀಸಿದ್ದಾರೆ.ಜಗಳದಲ್ಲಿ ಗಾಯಗೊಂಡ ಯುವತಿಗೆ ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬಸ್ ಬೆಳಗಾವಿ ಕಡೆಯಿಂದ ಹುಬ್ಬಳ್ಳಿಗೆ ಹೋಗುವಾಗ ಸೀಟ್ ವಿಚಾರಕ್ಕೆ ಗಲಾಟೆ ಆರಂಭವಾಗಿದ್ದು ನಂತರ ತಾರಕಕ್ಕೇರಿದೆ. ಈ ಬಗ್ಗೆ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.