ಸದ್ಯ ರಾಜ್ಯ ಕಾಂಗ್ರೆಸ್ (Congress) ಪಾಳಯದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಸಚಿವ ಸತೀಶ್ ಜಾರಕಿಹೊಳಿ (Satish jarakiholi) ನಡುವೆ ಜಟಾಪಟಿ ಏರ್ಪಟ್ಟಿದೆ.ಬೆಳಗಾವಿ (Belagavi) ಜಿಲ್ಲಾ ರಾಜಕಾರಣದಲ್ಲಿ ಹಸ್ತ ಕ್ಷೇಪದ ವಿಚಾರವಾಗಿ ಡಿಕೆಶಿ ಹಾಗೂ ಸತೀಶ್ ನಡುವೆ ತಿಕ್ಕಾಟ ಜೋರಾಗಿದೆ.
ಬೆಳಗಾವಿ ಡಿಸಿಸಿ ಕಚೇರಿಯನ್ನ ಲಕ್ಷ್ಮೀ ಹೆಬ್ಬಾಳಕರ್ (Lakshmi hebbalkar) ಕಟ್ಟಿದ್ದಾರೆ ಎಂದು ತಮ್ಮ ಭಾಷಣದ ವೇಳೆ ಲಕ್ಷ್ಮಿ ಹೆಬ್ಬಾಳ್ಕರ್ ಪರ ಡಿಕೆಶಿ ಬ್ಯಾಟಿಂಗ್ ಮಾಡಿದ್ದಾರೆ. ಇದರಿಂದ ತೀವ್ರ ಸಿಡಿಮಿಡಿಗೊಂಡ ಸಚಿವ ಸತೀಶ್ ಜಾರಕಿಹೊಳಿ,ಸಭೆಯಲ್ಲಿ ಎದ್ದು ಬಂದು ಮೈಕ್ ಹಿಡಿದ ಸತೀಶ್ ಜಾರಕಿಹೊಳಿ ಪದೇ ಪದೇ ಲಕ್ಷ್ಮೀ ಹೆಬ್ಬಾಳಕರ್ ಕಟ್ಟಿದ್ರು ಅಂತ ಹೇಳಬೇಡಿ ಎಂದು ಗರಂ ಆಗಿದ್ದಾರೆ.
ಹೀಗೆ ಹೇಳಿ ಇತರರನ್ನ ಅವಮಾನಿಸಬೇಡಿ.ಡಿಸಿಸಿ ಕಚೇರಿ ಕಟ್ಟಡಕ್ಕೆ ನಾನೂ ಹಣ ನೀಡಿದ್ದೇನೆ.ರಮೇಶ್ ಜಾರಕಿಹೊಳಿ (Ramesh jarakiholi) ಕಟ್ಟಡ ನಿರ್ಮಾಣಕ್ಕೆ ಜಾಗ ನೀಡಿದ್ದರು.ನನ್ನ ಸ್ವಂತ ದುಡ್ಡಿನಲ್ಲಿ ಮೂರು ಕೋಟಿ ನೀಡಿದ್ದೇನೆ ಎಂದು ಸತ್ಯ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.
ಈ ವೇಳೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಧ್ಯ ಪ್ರವೇಶಿಸಲು ಯತ್ನಿಸಿದ್ದಾರೆ.ಅಂತಿಮವಾಗಿ ವೇದಿಕೆಯಲ್ಲಿ ಪರಿಸ್ಥಿತಿ ಬೇರೆ ಕಡೆ ಹೋಗುತ್ತಿರುವುದನ್ನ ಅರಿತು ಕಾರ್ಯಕ್ರಮದ ಉಸ್ತುವಾರಿಗಳು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.