ಗಾಂಧೀಜಿಯನ್ನ ರಾಷ್ಟ್ರಪಿತ ಎಂದು ಒಪ್ಪಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಹಿಂದೂ ಕಾರ್ಯಕರ್ತೆ ಮೀನಾಕ್ಷಿ ವಿವಾದ ಸೃಷ್ಟಿಸಿದ್ದಾರೆ.ಉಡುಪಿಯಲ್ಲಿ ನಡೆದ ವಿಶ್ವಾರ್ಪಣಂ ಕಾರ್ಯಕ್ರಮದಲ್ಲಿ ಹಿಂದೂ ಕಾರ್ಯಕರ್ತೆ ಮೀನಾಕ್ಷಿ ಈ ಹೇಳಿಕೆ ನೀಡಿದ್ದಾರೆ.

ಗಾಂಧೀಜಿ ಜಿನ್ನಾ ಜೊತೆ ಸೇರಿ ಪಾಕಿಸ್ತಾನಕ್ಕೆ ಜನ್ಮ ನೀಡಿದ್ದಾರೆ.ಗಾಂಧೀಜಿ ಹಿಂದೂಗಳನ್ನ ದುರ್ಬಲಗೊಳಿಸಲು ಪ್ರತಿಪಾದಿಸಿದ್ದರು, ಅವರನ್ನು ರಾಷ್ಟ್ರಪಿತ ಎಂದು ಒಪ್ಪಿಕೊಳ್ಳುವುದಿಲ್ಲ ಅಂತ ಹೇಳಿದ್ದರು. ಹೀಗಾಗಿ ಗಾಂಧೀಜಿಯನ್ನ ರಾಷ್ಟ್ರಪಿತ ಎಂದು ಒಪ್ಪವುದಿಲ್ಲ ಎಂದು ಹೇಳಿದ್ದು, ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಉಡುಪಿಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿಂದೂ ಕಾರ್ಯಕರ್ತೆ ಮೀನಾಕ್ಷಿ, ಸತ್ಯ ಸಂಗತಿಗಳನ್ನ ಹೇಳಿದ್ದಕ್ಕೆ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ವಿಡಿಯೋ ಪೋಸ್ಟ್ ಮಾಡಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.ಇದು ಕಾಂಗ್ರೆಸ್ ಸರ್ಕಾರದ ದ್ವೇಷಡಾ ರಾಜಕಾರಣ ಅಂತಾ ಮೀನಾಕ್ಷಿ ಆರೋಪ ಮಾಡಿದ್ದಾರೆ.