ಕೊಪ್ಪಳದ ಭತ್ತದನಾಡು ಗಂಗಾವತಿಯಲ್ಲಿ ಇಂದು ಅದ್ಧೂರಿಯಾಗಿ ಚನ್ನಬಸಪ್ಪ ತಾತಾ ರಥೋತ್ಸವ ಭಾರಿ ಜನಸ್ತೋಮದ ನಡುವೆ ನೆರವೇರಿದೆ.ಕೊಪ್ಪಳ ಜಿಲ್ಲೆಯ ಗಂಗಾವತಿಯ ಆರಾಧ್ಯದೈವ ಎಂದೇ ಪ್ರಸಿದ್ಧಿ ಹೊಂದಿದ ಶ್ರೀ ಚನ್ನಮಲ್ಲಿಕಾರ್ಜುನ ಮಠದಲ್ಲಿ 79ನೇ ಮಹಾರಥೋತ್ಸವಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾಗಿದ್ದಾರೆ.

ಈ ಉತ್ಸವದಲ್ಲಿ ತೇರಿಗೆ ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದ ಭಕ್ತರು,ತಾತನ ಜಾತ್ರೆಗೆ ಬಂದು ಮಹಾರಥೋತ್ಸವದಲ್ಲಿ ಭಾಗಿಯಾಗಿದ್ದರ ಕುರಿತು ಭಕ್ತರ ಸಂತಸ ವ್ಯಕ್ತಪಡಿಸಿದ್ದಾರೆ. ತಾತನ ಪವಾಡದಿಂದಲೇ ಗಂಗಾವತಿ ಭತ್ತದ ಕಣಜ ಅಭಿವೃದ್ಧಿಯತ್ತ ಸಾಗ್ತಿದೆ ಎನ್ನುವ ನಂಬಿಕೆ ಜನರಲ್ಲಿದೆ. ಹಾಗಾಗಿ ಅಜ್ಜನ ಜಾತ್ರೆ ಅದ್ದೂರಿಯಾಗಿ ನೆರವೇರಿಸಲಾಗುತ್ತಿದೆ.

ಗಂಗಾವತಿಯ ಆರಾಧ್ಯದೈವ ದೈವ ಶ್ರೀಚನ್ನಬಸವ ತಾತನ ರಥೋತ್ಸವ ಭಾವೈಕ್ಯತೆಗೆ ಸಾಕ್ಷಿಯಾಗಿದೆ.ಜಾತ್ರೆ ಹಿನ್ನೆಲೆ ಹಜರತ್ ಕರ್ನೂಲ್ ದರ್ಗಾದ ಕಮಿಟಿಯಿಂದ ಹೂವುಮಾಲೆ ಅರ್ಪಣೆ ಮಾಡಲಾಗಿದೆ.ತಾತನ ರಥಕ್ಕೆ ಮುಸ್ಲಿಂ ಬಾಂಧವರು ಹೂವುಮಾಲೆ ಅರ್ಪಿಸಿದ್ದಾರೆ.ಸೈಯದ್ ಅಲಿ, ಉಸ್ಮಾನ್, ಗೌಸಿಯಾ, ಶಾಹಿನ್ ಸರ್ವಧರ್ಮಿಯರು ಭಾಗಿಯಾಗಿ ಗಮನ ಸೆಳೆದಿದ್ದಾರೆ.