ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೆಹಲಿಯ ಅಶೋಕ್ ವಿಹಾರ್ನಲ್ಲಿ ನಿರ್ಮಾಣಗೊಂಡಿರುವ ಸ್ವಾಭಿಮಾನ ಅಪಾರ್ಟ್ಮೆಂಟ್ನಲ್ಲಿ 1,675 ಫ್ಲ್ಯಾಟ್ಗಳನ್ನು ಜಿಜೆ ಕ್ಲಸ್ಟರ್ ನಿವಾಸಿಗಳಿಗೆ ಮೀಸಲಾಗಿದ್ದು, ಇದರಲ್ಲಿ ಅರ್ಹ ಪ್ರಾಪ್ತಿದಾರರಿಗೆ ಕೀಗಳನ್ನು ಹಸ್ತಾಂತರಿಸಿದರು.ಈ ಸಂದರ್ಭ, ಪ್ರಧಾನಿ ಮೋದಿ ಅವರು ದೆಹಲಿ ಮಾಜಿ ಮುಖ್ಯಮಂತ್ರಿಯಾಗಿದ್ದ ಅರವಿಂದ ಕೇಜ್ರಿವಾಲ್ ಅವರ ವಿರುದ್ಧ ವ್ಯಂಗ್ಯವಾಡಿ “ನಾನೂ ಕೂಡ ಅದ್ಭುತ ಅರಮನೆ ನಿರ್ಮಿಸಿಕೊಳ್ಳಬಹುದಾಗಿತ್ತು.
ಆದರೆ, ನಾನು ನನ್ನ ವೈಯಕ್ತಿಕ ಇಚ್ಚೆಗೆ ಅನುಗುಣವಾಗಿ ವರ್ತಿಸಿಲ್ಲ ಬದಲಾಗಿ 4 ಕೋಟಿ ಗರೀಬರ ಮನೆಗಳನ್ನು ನಿರ್ಮಿಸಿದ್ದೇನೆ” ಎಂದು ಮೋದಿ ಹೇಳಿದರು.“ನಾನು ಏನು ಹೇಳುತ್ತೇನೆ ಅದನ್ನು ಮಾಡುತ್ತಲೇ ಇರುತ್ತೇನೆ” ಎಂದು ಮೋದಿ ಹೇಳಿದರು.“ನಿಮ್ಮೆಲ್ಲರ ಬಳಿ ನನ್ನ ಕೋರಿಕೆ ಇದೆ, ನಿಮ್ಮ ಬಳಿ ಬಡಾವಣೆಯ ನಿವಾಸಿಗಳು ಬಂದ್ರೆ ಅವರಿಗೆ ತಿಳಿಸಿ, ಇಂದು ಇಲ್ಲದಿದ್ದರೆ ನಾಳೆ ಅವರು ಪಕ್ಕಾ ಮನೆಗಳನ್ನು ಪಡೆಯುತ್ತಾರೆ” ಎಂದು ಪ್ರಧಾನಮಂತ್ರಿ ಭರವಸೆ ನೀಡಿದರು.
ನಿರ್ಮಾಣಗೊಂಡ ಹೊಸ ಮನೆಗಳನ್ನು ಮೋದಿ ಪರಿಶೀಲನೆ ನಡೆಸಿ, ವಸತಿ ಯೋಜನೆಯ ಫೋಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಪ್ರಧಾನಮಂತ್ರಿ ಅವರ ಈ ಯೋಜನೆಗೆ ಕೃತಜ್ಞತೆ ವ್ಯಕ್ತಪಡಿಸಿದರು. ಬಿಜೆಪಿಯು ಸಾಮಾಜಿಕ ಮಾಧ್ಯಮದಲ್ಲಿ ಹೇಳಿದಂತೆ “ಮೋದಿ ಅವರು ಹೇಳಿದಂತೆ ಮಾಡುತ್ತಾರೆ.ಜಹಾನ್ ಝುಗ್ಗಿ, ವಹಿನ್ ಮಕಾನ್” ಎಂದು ಅವರು ತಮ್ಮ ಮಾತು ಈಡೇರಿಸಿದ್ದಾರೆ.
ಪ್ರಧಾನಮಂತ್ರಿ ಮೋದಿ ಅವರು ದೆಹಲಿಯ ನೌರೋಜಿ ನಗರದ ವಿಶ್ವ ವಾಣಿಜ್ಯ ಕೇಂದ್ರ, ಸಿಬಿಎಸ್ಇ ಕಚೇರಿ ಸಂಕೀರ್ಣ, ಮತ್ತು ಸರ್ಜನೀ ನಗರದಲ್ಲಿ GPRA ಕ್ವಾರ್ಟರ್ಸ್ನ ಉದ್ಘಾಟನೆ ನೆರವೇರಿಸಿದರು. ನಜಫ್ಗಢ್ನ ರೋಷನ್ಪುರದಲ್ಲಿ ಹಿಂದೂತ್ವ ವಿದ್ವಾಂಸ ವೀರ ಸಾವರ್ಕರ್ ಹೆಸರಿನ ಕಾಲೇಜಿಗೆ ಶಿಲಾನ್ಯಾಸ ಮಾಡಿದರು.
ಸುರಾಜ್ಮಲ್ ವಿಹಾರ್ನಲ್ಲಿ 15.25 ಎಕರೆ ಪ್ರದೇಶದಲ್ಲಿ, ₹373 ಕೋಟಿ ವೆಚ್ಚದಲ್ಲಿ, ಪೂರ್ವ ಸಮುದಾಯದಲ್ಲಿ ಹೊಸ ಕ್ಯಾಂಪಸ್ ನಿರ್ಮಿಸಲಾಗುತ್ತಿದೆ. ವಕೀಲರಿಗೆ ವಿಶೇಷ ಕೋರ್ಸ್ಗಳು, ಡಿಜಿಟಲ್ ಲೈಬ್ರರಿ, ಮತ್ತು ಮಲ್ಟಿಡಿಸಿಪ್ಲಿನರಿ ತರಗತಿಗಳ ಸೌಲಭ್ಯ ಒದಗಿಸಲಾಗುವುದು. ಇವೆಲ್ಲವೂ ದೆಹಲಿ ವಿಶ್ವವಿದ್ಯಾಲಯದ ವ್ಯಾಪ್ತಿಯನ್ನು ವಿಸ್ತರಿಸಲು ನಡೆಯುವ ಭಾಗವಾಗಿದೆ.