
ಹೊಸದಿಲ್ಲಿ: ಕೆನಡಾದಲ್ಲಿರುವ ಕನಿಷ್ಠ 250 ಕಾಲೇಜುಗಳು ಅಂತಾರಾಷ್ಟ್ರೀಯ ಮಟ್ಟದ ಮಾನವ ಕಳ್ಳಸಾಗಣೆ ಜಾಲದಲ್ಲಿ ಭಾಗಿಯಾಗಿವೆ ಎಂಬ ಆಘಾತಕಾರಿ ಸಂಗತಿ ಜಾರಿ ನಿರ್ದೇಶನಾಲಯ (ಇ.ಡಿ.) ತನಿಖೆಯಿಂದ ಬಯಲಾಗಿದೆ.ಭಾರತದಿಂದ ತೆರಳುವ ಅಕ್ರಮ ವಲಸಿಗರನ್ನು ಅಮೆರಿಕಕ್ಕೆ ಕಳುಹಿಸಲು ಈ ಕಾಲೇಜುಗಳು ಭಾಗಿಯಾಗಿವೆ ಎಂದು ತನಿಖಾ ಸಂಸ್ಥೆ ಹೇಳಿಕೊಂಡಿದೆ.

3 ವರ್ಷಗಳ ಹಿಂದೆ ಅಕ್ರಮವಾಗಿ ಕೆನಡಾ ಮೂಲಕ ಅಮೆರಿಕಕ್ಕೆ ತೆರಳಲು ಯತ್ನಿಸಿದ್ದ ಗುಜರಾತಿ ಕುಟುಂಬದ ಮೂವರು ಚಳಿಯಿಂದಾಗಿ ಗಡಿಯಲ್ಲೇ ಮೃತಪಟ್ಟಿದ್ದರು. ಆ ಬಗ್ಗೆ ತನಿಖೆ ನಡೆಸುವ ವೇಳೆ ಈ ಅಕ್ರಮ ಜಾಲದ ಬಗ್ಗೆ ಇ.ಡಿ.ಗೆ ಮಾಹಿತಿ ಲಭಿಸಿತ್ತು. ಭಾರತದಿಂದ ಕೆನಡಾಗೆ ತೆರಳಲು ಕೇವಲ 50-60 ಲಕ್ಷ ರೂಪಾಯಿಗಳಲ್ಲಿ ವಿದ್ಯಾರ್ಥಿ ವೀಸಾ ದೊರೆಯುತ್ತಿದೆ.
ಏಜೆಂಟುಗಳ ಮೂಲಕ ಈ ವೀಸಾ ಪಡೆಯಲು ಕೆನಡಾದ 260 ಕಾಲೇಜುಗಳು ಸಹಾಯ ಮಾಡಿವೆ. ಅಕ್ರಮ ವಲಸಿಗರಿಗೆ ತಮ್ಮ ಕಾಲೇಜುಗಳಲ್ಲಿ ವ್ಯಾಸಂಗ ಮಾಡಲು ವೀಸಾ ನೀಡಿವೆ. ಅಲ್ಲಿಂದ ಕಾಲೇಜಿಗೆ ತೆರಳುವ ಬದಲು ಅಮೆರಿಕಕ್ಕೆ ಅಕ್ರಮವಾಗಿ ತೆರಳುತ್ತಾರೆ ತನಿಖಾ ಸಂಸ್ಥೆ ಹೇಳಿಕೊಂಡಿದೆ. ವಿದ್ಯಾಭ್ಯಾಸಕ್ಕೆ ವೀಸಾ ಪಡೆದು ಇತರ ಉದ್ಯೋಗ ಮಾಡುತ್ತಿರುವುದನ್ನು ಪತ್ತೆ ಹಚ್ಚಿವೆ.






