
ಕಠ್ಮಂಡು:ನೇಪಾಳದಲ್ಲಿ ಚಿನ್ನ ಕಳ್ಳಸಾಗಣೆ ಆರೋಪದ ಮೇಲೆ ಇಬ್ಬರು ಭಾರತೀಯರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಉತ್ತರ ಪ್ರದೇಶದ ನಿವಾಸಿಗಳಾದ ದೀಪಕ್ ಗುಪ್ತಾ (44) ಮತ್ತು ಸುಮಿತ್ ಬರ್ಮಾ (34) ಅವರನ್ನು ಬಂಧಿಸಿದ ಪೊಲೀಸರು ಕೈಲಾಲಿ ಜಿಲ್ಲೆಯ ಧಂಗಾಧಿ ಉಪ-ಮಹಾನಗರದಲ್ಲಿ ಅವರ ಬಳಿಯಿದ್ದ 549.2 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಯಾವುದೇ ಕಸ್ಟಮ್ಸ್ ಸುಂಕವನ್ನು ಪಾವತಿಸದೆ ಅವರು ಭಾರತೀಯ ನಂಬರ್ ಪ್ಲೇಟ್ ಹೊಂದಿರುವ ಕಾರಿನಲ್ಲಿ ಚಿನ್ನವನ್ನು ಸಾಗಿಸುತ್ತಿದ್ದರು ಎಂದು ನೇಪಾಳ ಪೊಲೀಸ್ ಪ್ರಧಾನ ಕಚೇರಿ ಹೊರಡಿಸಿದ ಬುಲೆಟಿನ್ ತಿಳಿಸಿದೆ. ಭಾರತಕ್ಕೆ ಹೋಲಿಸಿದರೆ ನೇಪಾಳದಲ್ಲಿ ಚಿನ್ನಕ್ಕೆ ಹೆಚ್ಚಿನ ಕಸ್ಟಮ್ಸ್ ಸುಂಕ ವಿಧಿಸುವುದರಿಂದ ಅಲ್ಲಿ ಚಿನ್ನದ ದರ ದುಬಾರಿಯಾಗಿದೆ.









